This is the title of the web page
This is the title of the web page

2000 ರೂ. ನೋಟ್ ಚಲಾವಣೆ ಸ್ಥಗಿತ;  ಆರ್‌ಬಿಐ

2000 ರೂ. ನೋಟ್ ಚಲಾವಣೆ ಸ್ಥಗಿತ;  ಆರ್‌ಬಿಐ

 

ನವದೆಹಲಿ : ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆಯ ನೋಟ್ ಚಲಾವಣೆ ಸ್ಥಗಿತಗೊಳಿಸಿ, ವಾಪಸ್ ಪಡೆಯಲು ಆರ್‌ಬಿಐ ಆದೇಶಿಸಿದೆ

ಗ್ರಾಹಕರು ತಮ್ಮಲ್ಲಿರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಯಲ್ಲಿ ತಮ್ಮದೇ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಬಹುದು. ಇನ್ನು 2000 ರೂ. ನೋಟು ವಿನಿಮಯಕ್ಕೆ ಒಂದು ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ಚಟುವಟಿಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಒಂದು ದಿನ ಒಬ್ಬ ವ್ಯಕ್ತಿಗೆ ಗರಿಷ್ಠ 20,000 ರೂ. ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಲಾಗಿದೆ.

2016ರಲ್ಲಿ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯೀಕರಣದ ನಂತರ ಹೊಸದಾಗಿ 2000 ರೂ. ನೋಟುಗಳನ್ನು ಪರಿಚಯಿಸಿತ್ತು. ಇದೀಗ ಚಲಾವಣೆ ನಿಲ್ಲಿಸಿ ವಾಪಸ್ ಪಡೆಯುವುದಾಗಿ ಆರ್‌ಬಿಐ ಶುಕ್ರವಾರ ತಿಳಿಸಿದೆ.

ಮುಂಬರುವ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆ ಸ್ಥಾನ ನೀಡಲು ಕಾಂಗ್ರೆಸ್ ಮುಂದಾಗಿದೆ
ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಗ್ರಾಹಕರು ಕೂಡ ಆತಂಕ ಪಡುವ ಅಗತ್ಯವಿಲ್ಲ, ನೋಟು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ.

ಮೇ 23ರಿಂದ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಮಾತ್ರವಲ್ಲ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ಎಲ್ಲಾ ವಿನಿಮಯ, ಜಮಾವಣೆ ಮುಗಿಸಬೇಕು ಎಂದು ಆರ್‌ಬಿಐ ಆದೇಶಿಸಿದೆ.