ವದುದಕ್ಷಿಣೆ ನೀಡಿಲ್ಲವೆಂದು ತಾಳಿ ಕಟ್ಟಿಲಿಲ್ಲ ವದು: ಮುಂದೆ ನಡೆದಿದ್ದೆ ರೋಚಕ್..!

ವದುದಕ್ಷಿಣೆ ನೀಡಿಲ್ಲವೆಂದು ತಾಳಿ ಕಟ್ಟಿಲಿಲ್ಲ ವದು: ಮುಂದೆ ನಡೆದಿದ್ದೆ ರೋಚಕ್..!

 

ಬೆಳಗಾವಿ: ತಾಳಿ ಕಟ್ಟುವ ಸಮಯದಲ್ಲಿ ಮದುವೆ ‌ಮುರಿದು ಬಿದ್ದ ಘಟನೆ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಚಿನ್ನ ನೀಡುವಂತೆ ವದು ಕ್ಯಾತೆ ತೆಗೆದಿದ್ದಾನೆ.

ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ಎಂಬವನೊಂದಿಗೆ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು. ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪ ಕೂಡ ಬುಕ್ ಮಾಡಲಾಗಿತ್ತು.

2023ರ ಡಿಸೆಂಬರ್ 30 ರಂದು ನಡೆದ ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ 100 ಗ್ರಾಂ ಚಿನ್ನ,‌ 10 ಲಕ್ಷ ವರದಕ್ಷಿಣೆ ನೀಡುವ ಮಾತುಕತೆ ನಡೆದಿತ್ತು.
ಆದರೆ, ‌ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ತಾಳಿ ಕಟ್ಟಲು ವರ ಸಚಿನ್ ಒಲ್ಲೆ ಎಂದಿದ್ದಾನೆ. ಇದರಿಂದ ಬೆಸತ್ತ ವಧುವಿನ ಕುಟುಂಬಸ್ಥರು ಖಾನಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವರನ ವಿರುದ್ಧ ವಧು ನೀಡಿದ ದೂರಿನ ಅನ್ವಯ ಪೊಲೀಸರು, ಸಚಿನ್​ ಪಾಟೀಲ್​ನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.