ಬೆಂಗಳೂರು: ಬಾಬಾಬುಡನ್ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣ ರೀ ಓಪನ್ ಮಾಡಲಾಗಿದೆ ಅನ್ನೋದು ಅಪ್ಪಟ ಸುಳ್ಳು, ಇದು ತಪ್ಪು ಮಾಹಿತಿ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, 2017ರಲ್ಲಿ ದಾಖಲಾಗಿದ್ದ ಕೇಸ್ನ ಸಹಜ ಪ್ರಕ್ರಿಯೆ. ಸಹಜ ಕಾನೂನು ಪ್ರಕ್ರಿಯೆಯ ಭಾಗವಾಗಿ ಆರೋಪಿಗಳಿಗೆ ಕೋರ್ಟ್ ಸಮನ್ಸ್ ನೀಡಿದೆ ಅಷ್ಟೇ ಎಂದು ಹೇಳಿದ್ದಾರೆ.
ಜನವರಿ 8ರಂದು ಕೋರ್ಟ್ಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಸರ್ಕಾರ ಮರು ತನಿಖೆಗೆ ಮುಂದಾಗಿದೆ ಅನ್ನುವುದು ಸುಳ್ಳು. ಇದು ತಪ್ಪು, ದುರುದ್ದೇಶಪೂರಿತ ಸುಳ್ಳು ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.