This is the title of the web page
This is the title of the web page

ರಾಮದುರ್ಗ ಸಾಲಬಾಧೆ ರೈತ ಆತ್ಮಹತ್ಯೆ

ರಾಮದುರ್ಗ ಸಾಲಬಾಧೆ ರೈತ ಆತ್ಮಹತ್ಯೆ

 

ರಾಮದುರ್ಗ : ಸಾಲಬಾಧೆಯಿAದ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಹಲಗತ್ತಿ ಗ್ರಾಮದ ಲಕ್ಷö್ಮಣಗೌಡ ಶಿವನಗೌಡ ರುದ್ರಗೌಡರ (೩೫) ಮೃತ ರೈತನಾಗಿದ್ದಾನೆ. ತನ್ನ ೩ ಏಕರೆ ಜಮೀನಿನಲ್ಲಿ ವಿವಿಧ ಬೆಳೆಗಳ ಕೃಷಿ ಚಟುವಟಿಕೆ ಸಲುವಾಗಿ ರಾಮದುರ್ಗ ಸ್ಟೇಟ್ ಬ್ಯಾಂಕಿನಲ್ಲಿ ೨ ಲಕ್ಷ ೨೦ ಸಾವಿರ ಹಲಗತ್ತಿ ಪ್ರಾಥಮಿಕ ಸಹಕಾರಿ ಸಂಘದಲ್ಲಿ ೪೦ ಸಾವಿರ ಕೈಗಾಡ ಸಾಲ ಅಂತಾ ಎರಡು ಲಕ್ಷ ಸಾಲ ಮಾಡಿದ್ದನು. ಮಾಡಿದ ಸಾಲ ತಿರಿಸುವುದು ಹೇಗೆಂದು ದಿಕ್ಕು ತೋಚದಂತಾಗಿ, ಜಮೀನಿನಲ್ಲಿ ನಿರ್ಮಿಸಿರುವ ಶೆಡ್ಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತನ ಹೆಂಡತಿ ಸುಧಾ ಲಕ್ಷö್ಮಣಗೌಡ ರುದ್ರಗೌಡ್ರ ರಾಮದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪ್ರಕರಣವನ್ನು ದಾಖಲಿಸಿಕೊಂಡ ಪಿಎಸ್‌ಐ ಶಿವಾನಂದ ಕಾರಜೋಳ ತನಿಖೆ ಕೈಗೊಂಡಿದ್ದಾರೆ.