ಬೆಂಗಳೂರು: ಕರ್ನಾಟಕದಲ್ಲಿ ದಲಿತ ಬಲವರ್ಧನೆ ನಡೆಯುತ್ತಿರುವುದು ಕಂಡು ಬರುತ್ತಿದೆ, ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆಯಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ದಲಿತರ ಬಲವರ್ಧನೆ, ದಲಿತ ಮತಗಳ ಕ್ರೂಡೀಕರಣಕ್ಕೆ ಹಲವು ತಂತ್ರ ಹೆಣೆಯಲಾಗುತ್ತಿದೆ. ಕಲಬುರಗಿ, ವಿಜಯಪುರ, ಚಿತ್ರದುರ್ಗ, ಕೋಲಾರ ಮತ್ತು ಚಾಮರಾಜನಗರ ಮೀಸಲು ಕ್ಷೇತ್ರಗಳು ಮತ್ತು ರಾಯಚೂರು, ಬಳ್ಳಾರಿಯ ಎರಡು ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ ಇದು ಕಾಂಗ್ರೆಸ್‌ಗೆ ಪೂರಕವಾಗಿ ಪರಿಣಮಿಸಬಹುದು ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಮತ್ತು ದಲಿತ ಮುಖಂಡ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ದಲಿತ ಮತಗಳ ಪ್ರಮುಖ ಪಾಲು ಕಾಂಗ್ರೆಸ್‌ಗೆ ಸೇರುವ ನಿರೀಕ್ಷೆಯಿದೆ. ಏಕೆಂದರೆ ಹಿರಿಯ ದಲಿತ ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ಕಾಂಗ್ರೆಸ್‌ಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದಲಿತರ ಮತ ಕ್ರೋಡೀಕರಣವಾಗಿದೆ ಅಥವಾ ಆಗುತ್ತಿದೆ ಎಂಬ ಅಭಿಪ್ರಾಯವನ್ನು ಒಪ್ಪಲಾಗದು, ಅಂದರೆ ಅಂದುಕೊಂಡ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ಎಚ್. ಹನುಮಂತಪ್ಪ ಅಭಿಪ್ರಾಯಪಟ್ಟಿದ್ದಾರೆ. ದಲಿತ ಬಲವರ್ಧನೆ ಅಥವಾ ದಲಿತರ ಕ್ರೂಡೀಕರಣ ನಡೆಯುತ್ತಿರುವುದು ನನಗೆ ಕಾಣುತ್ತಿಲ್ಲ. ಬಹಳ ಹಿಂದೆ ದಲಿತ ಮತಗಳು ಒಗ್ಗಟ್ಟಿನಿಂದ ಕೂಡಿದ್ದವು. ಆದರೆ ಈಗ ಅದು ಕೋಮು ಮತ್ತು ಜಾತಿಗಳ ಆಧಾರದ ಮೇಲೆ ವಿಭಜನೆಯಾಗಿದೆ. ಚಿತ್ರದುರ್ಗದ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ಇಬ್ಬರು ದಲಿತ ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆದ ಬಗ್ಗೆ ಮಾತನಾಡಿದರು.