ಪ್ರಧಾನಿ ಮೋದಿಗೆ ದಿಕ್ಕಾರ ಕೂಗಿದ ಟಿಕೆಟ್ ಕೈತಪ್ಪಿದ ಶಾಸಕ ಯಾದವಾಡ ಬೆಂಬಲಿಗರ ಪ್ರತಿಭಟನೆ

ಪ್ರಧಾನಿ ಮೋದಿಗೆ ದಿಕ್ಕಾರ ಕೂಗಿದ ಟಿಕೆಟ್ ಕೈತಪ್ಪಿದ ಶಾಸಕ ಯಾದವಾಡ ಬೆಂಬಲಿಗರ ಪ್ರತಿಭಟನೆ

 

ಬೆಳಗಾವಿ, ಏ 12:ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರವು ಆಗಿರುವ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ಆಯ್ಕೆಯಾಗಿದ್ದ ಬಂದು ಆಡಳಿತ ನೀಡಿದ್ದ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಈ ಬಾರಿಯ ಟಿಕೆಟ್ ನೀಡಲಾಗಿಲ್ಲ.  ಬಹುನಿರೀಕ್ಷೆಯ ಆಡಳಿತಾರೂಢ ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆಯಾಗಿದೆ. ಈ ಪೈಕಿ ಟಿಕೆಟ್ ಕೈ ತಪ್ಪಿದ್ದ ರಾಮದುರ್ಗ ಶಾಸಕ ಬೆಂಬಲಿಗರು ಆಕ್ರೋಶ ಘಟನೆ ನಡೆದಿದೆ.

ಟಿಕೆಟ್ ನೀಡದಿದ್ದಕ್ಕೆ ಆಕ್ರೋಶಗೊಂಡಿರುವ ಹಾಲಿ ಶಾಸಕ ಬೆಂಬಲಿಗರು ಮಂಗಳವಾರ ರಾತ್ರಿ ರಾಮದುರ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಾಸಕರ ಮನೆ ಮುಂದೆ ಜಮಾಯಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.