ರಾಜ್ಯಕ್ಕೆ ನಾಳೆ ಪ್ರಿಯಾಂಕ ಗಾಂಧಿ ಆಗಮನ :’ಕೈ ‘ ಮಾಸ್ಟರ್‌ ಪ್ಲ್ಯಾನ್ |

ರಾಜ್ಯಕ್ಕೆ ನಾಳೆ ಪ್ರಿಯಾಂಕ ಗಾಂಧಿ ಆಗಮನ :’ಕೈ ‘ ಮಾಸ್ಟರ್‌ ಪ್ಲ್ಯಾನ್ |

ಬೆಂಗಳೂರು : ವಿಧಾನ ಸಭೆ ಚುನಾವಣೆ ಹಿನ್ನೆಲೆ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ, ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.

ರಾಹುಲ್ ಗಾಂಧಿ ಪ್ರವಾಸ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಆಗಮಿಸಿ ಸಂಚಲನ ಸೃಷ್ಟಿಸಲಿದ್ದು,ಹಳೇ ಮೈಸೂರು ಭಾಗದ ಟಿನರಸೀಪುರ, ಹನೂರು, ಕೆ.ಆರ್ ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ರಣ ತಂತ್ರ ರೂಪಿಸಲಿದ್ದಾರೆ.

ರಾಜ್ಯದ 224 ಕ್ಷೇತ್ರಗಳಲ್ಲೂ ಪ್ರಚಾರ ಭರಾಟೆಯಿಂದ ಜೋರಾಗಲಿದೆ.

ಈಗಾಗಲೇ ಕಾಂಗ್ರೆಸ್‌ ಚುನಾವಣಾ ಮತ ಪ್ರಚಾರ ಬ್ಲೂ ಪ್ರಿಂಟ್‌ ರೆಡಿ ಮಾಡಲಾಗಿದೆ ಯಾರು ಯಾವ ಕ್ಷೇತ್ರದಲ್ಲಿ ರಣ ತಂತ್ರ ರೂಪಿಸಬೇಕೆಂದು ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲೇ ಈಗಾಗಲೇ ಕಾಂಗ್ರೆಸ್‌ ಬ್ಲೂ ಪ್ರಿಂಟ್‌ನಲ್ಲಿ ʼವೋಕಲ್ ಫಾರ್ ಲೋಕಲ್ʼ ಮಾದರಿಯನ್ನೂ ಅಳವಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಚಾರದ ಸಮಯದಲ್ಲಿ ಸ್ಥಳೀಯ ನಾಯಕರಿಗೆ ಹೆಚ್ಚಿನ ಒತ್ತುನೀಡಲಾಗುತ್ತದೆ. ಕಳೆದ ಬಾರಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಆಗಮಿಸಿ ಗೃಹ ಲಕ್ಷ್ಮಿ ಗ್ಯಾರಂಟಿ ಘೋಷಣೆ ಮಾಡಿದ್ದರು ಈಭಾರಿ ಯಾವ ಹೊಸ ಯೋಜನೆಯನ್ನು ಘೋಷಣೆ ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ.