ಬಾಗಲಕೋಟ್ ನಲ್ಲಿ ಕೈ ಪಡೆ ಲಿಂಗಾಯತ ಅಸ್ತ್ರ
ಬೀದರ್ ಕೋಟೆಯಲ್ಲಿ ರಾಹುಲ್ ಗಾಂಧಿ ರಣಕಹಳೆಗೆ ಬಿಜೆಪಿ ಭದ್ರಕೋಟೆ ಶೆಕ್ ..!
ಉತ್ತರ ಕರ್ನಾಟಕದಲ್ಲಿ ಲಿಂಗಾಯತ ನಾಯಕರಾಗಿರುವ ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ ದೀಡಿರಣೆ ಕಾಂಗ್ರೆಸ್ ಸೇರ್ಪಡೆಯಿಂದ ಲಿಂಗಾಯತ ಮತದಾರರು ಕೈ ಗೆ ಮಣೆ ಹಾಕುವ ಸಾಧ್ಯತೆ ಇದೆ.
ಬೆಂಗಳೂರು: ಕೋಲಾರ, ಬೀದರ್ ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಡೀ ಚಿತ್ರಣವೇ ಬದಲಾಗಿದೆ. ರಾಗಾ ಅಬ್ಬರ ಪ್ರಚಾರಕ್ಕೆ ಕೋಲಾರ, ಬೀದರ್ ದಲ್ಲಿ ಬಿಜೆಪಿ ಭದ್ರಕೋಟೆ ಶೆಕ್ ಆಗಿದೆ.
ಮುಂದಿನ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಲಿಂಗಾಯತ ಸಮಾವೇಶ ಆಯೋಜಿಸಿದ್ದು, ರಾಹುಲ್ ಗಾಂಧಿಯನ್ನು ತಂದು ಪ್ರಚಾರ ಮಾಡಲಿದೆ. ಈಗಾಗಲೇ ಬಿಜೆಪಿ ಲಿಂಗಾಯತ ಪ್ರಬಲ ನಾಯಕರು ಕಾಂಗ್ರೆಸ್ ಗೆ ಮಣೆ ಹಾಕಿದ್ದು, ಈ ಸಮಾವೇಶದಿಂದ ರಾಜ್ಯದಲ್ಲಿ ಮತ್ತೆ ಸುಂಟರಗಾಳ ಶುರುವಾದರೂ ತಪ್ಪೇನಿಲ್ಲ.
ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಹುಮನಾಬಾದ್ ಗೆ ರಾಹುಲ್ ಗಾಂಧಿ ಆಗಮಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ರಾಜಶೇಖರ ಪಾಟೀಲ್ ಅವರ ನಾಮಪತ್ರ ಸಲ್ಲಿಕೆಗೆ ಭರ್ಜರಿ ಪ್ರಚಾರ ನಡೆಸಿದರು. ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ ಶೋ ನಡೆಸಿದರು. ರಾಗಾ ಆಗಮನದಿಂದ ಬಿಜೆಪಿ ಕೋಟೆಯಲ್ಲಿ ಸಧ್ಯ ತಲ್ಲಣ ಸೃಷ್ಟಿಯಾಗಿದೆ.
ಬೆಳಗಾವಿಯಲ್ಲಿ ರಣಕಹಳೆ ಮೊಳಗಿಸಿದ ರಾಗಾ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮೊದಲಾದ ನಾಯಕರೊಂದಿಗೆ ಬೆಳಗಾವಿಯಲ್ಲಿ ರಣಕಹಳೆ ಮೊಳಗಿಸಿದ್ದಾರೆ. ಇದರಿಂದ ಅರ್ಧ ಮತದಾರರು ವಾಲಿದ್ದಾರೆ. ದಿನ ದಿನಕ್ಕೆ ರಾಜ್ಯದ ಕೆಲವೊಂದು ಕ್ಷೇತ್ರದ ಜನರು ಕೈ ಜೋಡಿಸುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಲಿಂಗಾಯತ ನಾಯಕರಾಗಿರುವ ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ ದೀಡಿರಣೆ ಕಾಂಗ್ರೆಸ್ ಸೇರ್ಪಡೆಯಾದ ಹಿನ್ನಲೆಯಲ್ಲಿ ಈ ಭಾಗದ ಲಿಂಗಾಯತ ಮತದಾರರು ಕೈ ಗೆ ಮಣೆ ಹಾಕುವ ಸಾಧ್ಯತೆ ಇದೆ.
ಯಾಕೆಂದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಲಿಂಗಾಯತರಿಗೆ ಅತೀ ಹೆಚ್ಚು ಟಿಕೆಟ್ ನೀಡಿದೆ. ಹೀಗಾಗಿ ಸಮುದಾಯ ಗಟ್ಟಿಯಾಗಿ ನಿಲ್ಲಲು ಇದೊಂದು ಅಸ್ತ್ರವಾಗಿದೆ. ಇದರಿಂದ ಎಲ್ಲಾ ಲಿಂಗಾಯತ ಮತದಾರರು ಕಾಂಗ್ರೆಸ್ ಸೈ ಎನ್ನುವುದರಲ್ಲಿ ಕಾದು ನೋಡೋಬೇಕಾಗಿದೆ