This is the title of the web page
This is the title of the web page

ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಡಿ‌.26 ರಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಧರ್ಮಸಭೆ ಹಾಗೂ ಪ್ರಥಮ ದತ್ತಿ ಉಪನ್ಯಾಸ ಆಯೋಜನೆ*

ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಡಿ‌.26 ರಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಧರ್ಮಸಭೆ ಹಾಗೂ ಪ್ರಥಮ ದತ್ತಿ ಉಪನ್ಯಾಸ ಆಯೋಜನೆ*

 

*ಧಾರವಾಡ(ಡಿ.24) :* ಜಿಲ್ಲೆಯ ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಗ್ರಾಮಸ್ಥರ ಸಹಕಾರದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆ ಮತ್ತು ಕಲಘಟಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಡಿ.26 ರಂದು ಬೆಳಿಗ್ಗೆ 10:30 ಗಂಟೆಗೆ ಮಡಕಿಹೊನ್ನಳ್ಳಿಯ ಶ್ರೀ ಕಲ್ಲಯ್ಯಸ್ವಾಮಿ ಮಠದ ಆವರಣದಲ್ಲಿ ಶ್ರೀಮದ್ ಕಾಶಿ ಜ್ಞಾನಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಧರ್ಮ ಜಾಗೃತಿ ಸಭೆ ಹಾಗೂ ಶ್ರೀ ಕಲ್ಲಯ್ಯಸ್ವಾಮಿಗಳ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮ ಹಾಗೂ ವೀರಶೈವ ಜಂಗಮ ಸಂಸ್ಥೆಯಿಂದ ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 35 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಸವಿನೆನಪಿಗಾಗಿ ಸ್ಥಾಪಿಸಿರುವ ದತ್ತಿನಿಧಿಯ ಪ್ರಥಮ ಉಪನ್ಯಾಸದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜಂಗಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಭು ಕೆಂಡದಮಠ ಮತ್ತು ಕಸಾಪ ತಾಲೂಕು ಕಾರ್ಯದರ್ಶಿ ವೀರಯ್ಯ ನಾಗಲೋತಿಮಠ ಅವರು, ಡಿ. 26 ರಂದು ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಬೆಳಿಗ್ಗೆ ಕರಡಿ ಮಜಲು, ಡೊಳ್ಳು, ಭಜನಾ ಮಂಡಳಿಗಳ ಮಂಗಲವಾದ್ಯಗಳ ಸಹಿತ ಸುಮಂಗಲೆಯರ ಪೂರ್ಣಕುಂಭದೊಂದಿಗೆ ಕಾಶಿ ಜಗದ್ಗುರುಗಳ ಉತ್ಸವ ನಡೆಯಲಿದೆ.
ನಂತರ ಜರುಗುವ ಸಮಾರಂಭದಲ್ಲಿ ಕಾಶಿ ಜಂಗವಾಡಿಮಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಆಶಿರ್ವಚನ ನೀಡುವರು ಎಂದು ತಿಳಿಸಿದ್ದಾರೆ.

ಕಲಘಟಗಿಯ ಹನ್ನೆರಡುಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ನವಲಗುಂದ ತಾಲೂಕಿನ ಶಿರಕೋಳದ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
ವೀರಶೈವ ಧರ್ಮಕ್ಕೆ ಪ್ರಸ್ತುತ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರ ಧಾರ್ಮಿಕ,ಸಾಹಿತ್ಯಕ, ಶೈಶಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಗಳ ಕುರಿತು ಪ್ರಥಮ ದತ್ತಿ ಉಪನ್ಯಾಸ ನೀಡುವರು

ಹುಬ್ಬಳ್ಳಿಯ ನವನಗರದ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು, ಅಂತೂರ-ಬೆಂತೂರ ಬೂದಿಸ್ವಾಮಿ ಹಿರೇಮಠದ ಕುಮಾರದೇವರು ಕಾರ್ಯಕ್ರಮದ ನೇತೃತ್ವವಹಿಸುವರು ಎಂದು ಅವರು ತಿಳಿಸಿದ್ದಾರೆ.

ಕಲಘಟಗಿ ತಹಸಿಲ್ದಾರ ಯಲ್ಲಪ್ಪ ಗೋಣೆಣ್ಣವರ
ಧಾರವಾಡ ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ವೀರಶೈವ ಜಂಗಮ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಂ.ಹಿರೇಮಠ, ಉಪಾಧ್ಯಕ್ಷ ಮೃತ್ಯುಂಜಯ ಎಸ್.ಕೋರಿಮಠ, ನಿವೃತ್ತ ಎಸಿಪಿ ಜಿ.ಆರ್.ಹಿರೇಮಠ, ಮಲ್ಲಿಕಾರ್ಜುನ ಪಾಟೀಲ, ಹು-ಧಾ ಮಹಾನಗರ ಪೊಲೀಸ ಆಯುಕ್ತರ ಕಚೇರಿಯ ಸಹಾಯಕ ಪೊಲೀಸ ಆಯುಕ್ತ ಮಂಜುನಾಥ ಬಿ.ಬಳಗಾನೂರಮಠ, ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಜವಳಿ, ಕ.ರಾ.ಸ.ಸೌ.ಸಂಘದ ತಾಲೂಕ ಅಧ್ಯಕ್ಷ ರಮೇಶ ಹೊಲ್ತಿಕೋಟಿ, ಕಲಘಟಗಿ ತಾ.ಪಂ. ಮಾಜಿ ಅಧ್ಯಕ್ಷ ಮಲ್ಲೆಶಪ್ಪ ಜಾವೂರ, ಉದ್ದಿಮೆದಾರ ವೀರಣ್ಣ ಕುಬಸದ, ಜಾನಪದ ಸಾಹಿತ್ಯ ಪರಿಷತ್ತ ತಾಲೂಕು ಅಧ್ಯಕ್ಷ ಮಲ್ಲಯ್ಯಸ್ವಾಮಿ ಆರ್.ತೋಟಗಂಟಿ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಚನ್ನಯ್ಯ ಹಿರೇಮಠ, ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ವಿ. ತಡಸಮಠ, ಕಲಘಟಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಬಿ.ಪಿ.ಮಠದ, ತಬಕದಹೊನ್ನಳ್ಳಿ ಹಿರಿಯರಾದ ಸಿ.ಎಫ್.ಪಾಟೀಲ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ ದುಪದ, ಮಡಕಿಹೊನ್ನಳ್ಳಿ ಗ್ರಾಮ ಪ್ರಮುಖರಾದ ಸಿದ್ರಾಮಯ್ಯ ಹಿರೇಮಠ, ಬಸವರಾಜ ಎಸ್. ಪರ್ವಾಪೂರ,ಬಸವರಾಜ ದೊಡಮನಿ, ಶಿವಪುತ್ರಪ್ಪ ಆಲದಕಟ್ಟ, ಶ್ರೀಧರ ಪಾಟೀಲ ಕುಲಕರ್ಣಿ ,ಕಲ್ಲಯ್ಯ ಹಿರೇಮಠ ಅವರು ಉಪಸ್ಥಿತರಿರುವರು ಎಂದು ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಪ್ರಕಟಣೆ ತಿಳಿಸಿದೆ.