ಬೆಂಗಳೂರು: ಮಗ ನಿನ್ನೆ ಹೊಸ ಬಟ್ಟೆ ಹಾಕಿಕೊಂಡು ಮನೆಯಿಂದ ಬರ್ತ್ ಡೇ ಎಂದು ಹೇಳಿ ಹೋಗಿದ್ದ.
ರಾತ್ರಿ ಪೊಲೀಸರು ನಿಮ್ಮ ಮಗ ಕೊಲೆ ಆಗಿದ್ದಾನೆ ಎಂದು ಫೋನ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಹೊಸ ವರ್ಷದ ಮೊದಲ ದಿನವೇ ಕಣ್ಣೀರು ಇಟ್ಟಿದ್ದಾರೆ.
ನ್ಯೂ ಇಯರ್ ರಾತ್ರಿ ಭೀಕರ ಹತ್ಯೆ ನಡೆದಿದೆ. ಮಾರಕಾಸ್ತ್ರಗಳಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಹನುಮಂತ ನಗರದ 80 ಅಡಿ ರಸ್ತೆಯಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ವಿಜಯ್ (21) ಎಂಬಾತನಯಾಗಿದೆ.
ಸ್ನೇಹಿತರಿಂದಲೇ ಯುವಕ ಕೊಲೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಆಟೋದಲ್ಲಿ ಬಂದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.