ಮುದ್ದೇಬಿಹಾಳ: ಬಿಜೆಪಿ ಸರ್ಕಾರ ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಿ ಬಂಜಾರ, ಭೋವಿ,
ಕೊರಚ, ಕೊರಮ ಇನ್ನಿತರ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಇದನ್ನು ಪ್ರತಿಭಟಿಸಲು ಈ ಬಾರಿ ಹುಲ್ಲೂರ ತಾಂಡಾ ಪ್ರಮುಖ ನಿವಾಸಿಗಳು ಮತದಾನವನ್ನು ಮಾಡುವುದಿಲ್ಲ ಮತ್ತು
ತಾಂಡಾದೊಳಗೆ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ
ಎನ್ನುವ ತೀರ್ಮಾನ ಕೈಕೊಂಡಿದ್ದಾರೆ. ಬುಧವಾರ ತಾಂಡಾದ ಮಾರುತೇಶ್ವರ ದೇವಸ್ಥಾನದ ಹತ್ತಿರ
ಸಭೆ ನಡೆಸಿ, ದೇವಸ್ಥಾನದ ಎದುರು ಒಗ್ಗಟ್ಟು ಪ್ರದರ್ಶಿಸಿ ತಮ್ಮ ತೀರ್ಮಾನ ಹೊರ ಹಾಕಿದ ಅವರು ಒಳ ಮೀಸಲಾತಿ ಜಾರಿ ಮಾಡುವ ಮೂಲಕ ಬಿಜೆಪಿ ಸರ್ಕಾರ ಬಂಜಾರಾ ಸಮಾಜದವರಿಗೆ ಹೆಚ್ಚಿನ ಅನ್ಯಾಯ ಮಾಡಿದೆ. ಇದು ರಾಜಕಾರಣಿಗಳು ನಡೆಸಿರುವ ದೊಡ್ಡ ಪ್ರಮಾಣದ ಕುತಂತ್ರವಾಗಿದೆ ಎಂದರು ಹಾಗೂ ಬಂಜಾರ ಸಮುದಾಯದ ಶಾಸಕರ ಮತ್ತು ಸಂಸದರ ವಿರುದ್ದ ಆಕ್ರೋಶ ಹೋರ ಹಾಕಿದರು. ಸಮಾಜದ ವಿರುದ್ದ ಧ್ವನಿ ಎತ್ತಲ್ಲು ಆಯ್ಕೆ ಮಾಡಿ ವಿಧಾನ ಸೌಧಕ್ಕೆ ಕಳಿಸಿದರೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಈ ಸ್ವ ಇಚ್ಚೆಯಿಂದ ರಾಜನಾಮಿ ನೀಡಿ ಮನೆಗೆ ಮರಳಲು ಆಗ್ರಹಿಸಿದ್ದರು.
ಈ ಸಂದರ್ಭ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಗ್ರಾಪಂ ಮಾಜಿ ಸದಸ್ಯ ಥಾವರಪ್ಪ
ಜಾಧವ ಅವರು ಕನ್ನಡ ಮತ್ತು ಲಂಬಾಣಿ ಭಾಷೆಯಲ್ಲಿ ಮಾತನಾಡಿ ತಮ್ಮ ತೀರ್ಮಾನ ಪ್ರಕಟಿಸಿ
ಬೊಮ್ಮಾಯಿ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಚಂದ್ರಹೂನಪ್ಪ ಚವ್ಹಾಣ, ಬಾಬು ನಾಯಕ,
ಸಂತೋಷ ಚವ್ಹಾಣ, ಮುತ್ತಣ್ಣ ರಾಠೋಡ, ಶಿವಾನಂದ ರಾಠೋಡ, ಮಲ್ಲು ಚವ್ಹಾಣ, ಸಂತೋಷ
ಜಾಧವ, ಪಾಂಡಪ್ಪ ಚವ್ಹಾಣ, ಲಾಲಸಿಂಗ ರಾಠೋಡ, ಮುರಳೀ ಭೀಸಿಂಗ, ಅಣ್ಣಪ್ಪ ಜಾಧವ ತಾಂಡಾ ನಿವಾಸಿಗಳು
ಪಾಲ್ಗೊಂಡಿದ್ದರು.