PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಕಾರು ಮುಖಾಮುಖಿ ಡಿಕ್ಕಿ: ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ

ಬೈಲಹೊಂಗಲ- ಎರಡು ಕಾರುಗಳ ಮದ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡು ದಾರುಣ ಘಟನೆ ಸಮೀಪದ ಇಂಚಲ ಗ್ರಾಮದ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.
ಮೃತಪಟ್ಟವರನ್ನು ಬೈಲಹೊಂಗಲದ ಪಟ್ಟಣದ ಲದ್ದಿಗಟ್ಟಿ ನಿವಾಸಿ ಮಂಗಲಾ ಮಹಾಂತೇಶ ಭರಮನಾಯ್ಕರ(50), ಚಾಲಕ ಸಂಪಗಾಂವ ಗ್ರಾಮದ ಶ್ರೀಶೈಲ ಸಿದ್ದನಗೌಡ ನಾಗನಗೌಡರ(40) ಎಂದು ಗುರುತಿಸಲಾಗಿದೆ. ಗಂಬೀರವಾಗಿ ಗಾಯಗೊಂಡವರನ್ನು ರಾಯನಾಯ್ಕ ಭರಮನಾಯ್ಕರ(87), ಗಂಗವ್ವ ರಾಯನಾಯ್ಕ ಭರಮನಾಯ್ಕರ(80), ಮಂಜುಳಾ ಶ್ರೀಶೈಲ ನಾಗನಗೌಡರ(30), ಇಂಚಲ ಗ್ರಾಮದ ಚಾಲಕ ಸುಭಾನಿ ಲಾಲಸಾಬ ವಕ್ಕುಂದ(28) ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಘಟನೆ ಹಿನ್ನಲೆ: ಬೈಲಹೊಂಗಲದ ಭರಮನಾಯ್ಕರ ಕುಟುಂಬದವರು ಜ.18 ರಂದು ಜರುಗಲಿರುವ ಮನೆಯ ವಾಸ್ತುಶಾಂತಿ ನಿಮಿತ್ತ ಕೊಣ್ಣೂರ ಗ್ರಾಮಕ್ಕೆ ಬಟ್ಟೆ ಖರೀದಿ ತೆರಳಿದ್ದರು. ಮರಳಿ ವಾಪಸ ಬರುವಾಗ ಎದುರಿಗೆ ಬರುತ್ತಿರುವ ಕಾರ ಇಂಚಲದಿಂದ ರಾಜ್ಯ ಹೆದ್ದಾರಿ ತೆರಳುವಾಗ ಇಂಚಲ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್‍ಪಿ ವೇಣುಗೋಪಾಲ ಎಂ., ಡಿವೈಎಸ್‍ಪಿ ರವಿ ನಾಯ್ಕ, ಮುರಗೋಡ ಪಿಐ ಈರಯ್ಯ ಮಠಪತಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.