ಬೆಳಗಾವಿ : ದೇಶಕ್ಕೆ ಸ್ವಾತಂತ್ರ್ಯವೆಂಬ ಮಹತ್ವದ ಕೊಡುಗೆ ನೀಡಿರುವ ಮಹಾತ್ಮ ಗಾಂಧೀಜಿ ಹಾಗೂ
ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ನೀಡಿರುವ ಸಂದೇಶಗಳು
ದೇಶವಾಸಿಗಳಿಗೆ ಆದರ್ಶಪ್ರಾಯವಾಗಿವೆ ಎಂದು ಮೇಯರ್ ಪ್ರೀತಿ ಕಾಮಕರ ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂಥ ಮಹನೀಯರ ಅಹಿಂಸಾತ್ಮಕ ಹೋರಾಟ ಹಾಗೂ ಸರಳ ಜೀವನದ ಮಾದರಿಯನ್ನು
ಎಲ್ಲರೂ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗಲು ಸಾಧ್ಯವೆಂದು ಹೇಳಿದರು.
ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ಗಾಂಧೀಜಿಯವರ ಅಹಿಂಸಾತ್ಮಕ ಮತ್ತು ಉಪವಾಸ ಸತ್ಯಾಗ್ರಹದ, ಅಸ್ತ್ರ , ಗ್ರಾಮ ರಾಜ್ಯದ ಕಲ್ಪನೆ ಹಾಗೂ ಶಾಸ್ತ್ರೀಜಿಯವರ ಅಧಿಕಾರಕ್ಕೆ ಅಂಟಿಕೊಳ್ಳದ
ಸರಳ ಬದುಕು ಜಗತ್ತಿಗೆ ಮಹತ್ವದ ಸಂದೇಶಗಳನ್ನು ಕೊಡುತ್ತವೆ ಎಂದು ಹೇಳಿದರು.
ಆಯುಕ್ತ ಕಾರ್ತಿಕ್ ಎಂ ಅವರು ಮಾತನಾಡಿ, ಸ್ವಾತಂತ್ರ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದ್ದ ಗಾಂಧೀಜಿ ಶಾಸ್ತ್ರಿಜಿ ಅವರ ಸ್ಪೂರ್ತಿದಾಯಕ ಸಂದೇಶಗಳಂತೆ ಬಾಹ್ಯ ಮತ್ತು ಅಂತರಂಗದ ಸ್ವಚ್ಛತೆಗೆ ಮಹತ್ವ ನೀಡುವ ಮೂಲಕ
ಸಾರ್ವಜನಿಕ ಸೇವೆಯಲ್ಲಿರುವವರು ಪಾರದರ್ಶಕತೆ , ಸತ್ಯ ಮತ್ತು ಪ್ರಾಮಾಣಿಕತೆಯನ್ನು
ಮೈಗೂಡಿಸಿಕೊಂಡಾಗ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿ ಕರ್ತವ್ಯ ಸಾರ್ಥಕವಾಗಲು ಸಾಧ್ಯವೆಂದು ಎಂದು ಹೇಳಿದರು.
ಇದಕ್ಕೂ ಮೊದಲು ಗಣ್ಯರು ಗಾಂಧೀಜಿ ಹಾಗೂ ಶಾಸ್ತ್ರಿಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೇಯಸ್ ನಾಕಾಡಿ, ನಗರಸೇವಕರಾದ ಸವಿತಾ ಕಾಂಬಳೆ, ವೀಣಾ ವಿಜಾಪೂರ, ರೇಖಾ ಹೂಗಾರ, ಪರಿಷತ್ ಕಾರ್ಯದರ್ಶಿ ರಮೇಶ ಬಡಿಗೇರ ಹಾಗೂ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.
_____________
ಫೋಟೋ ಶೀರ್ಷಿಕೆ :
ಮಹಾನಗರ ಪಾಲಿಕೆಯಲ್ಲಿ ನಡೆದ ಗಾಂಧೀಜಿ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ
ಮಾತನಾಡುತ್ತಿರುವ ಮೇಯರ್ ಪ್ರೀತಿ ಕಾಮಕರ,
ಉಪಮೇಯರ ಹಣಮಂತ ಕೊಂಗಾಲಿ, ಆಯುಕ್ತ ಕಾರ್ತಿಕ್ ಎಂ ಹಾಗೂ ನಗರ ಸೇವಕರು ಇದ್ದಾರೆ.
ಡಾ. ಸಿದ್ದು ಹುಲ್ಲೋಳಿ ಉಪ ಆಯುಕ್ತರು, ಮಹಾನಗರ ಪಾಲಿಕೆ, ಬೆಳಗಾವಿ