PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಸ್ವಿಸ್ ಅಧ್ಯಕ್ಷರ ಮೋದಿ ಔತಣಕೂಟದಲ್ಲಿ ಡಾ.ಆನಂದ ಸಂಕೇಶ್ವರ ಭಾಗಿ


ನವದೆಹಲಿ: ಮೂರು ದಿನಗಳ ಭಾರತ ಭೇಟಿಗಾಗಿ ಸೋಮವಾರ ನವದೆಹಲಿಗೆ ಆಗಮಿಸಿದ  ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ನಂತರ ಪರ್ಮೆಲಿನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವ್ಯಾಪಾರ, ಹೂಡಿಕೆ, ಎಐ, ರಕ್ಷಣಾ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ ರಂಗಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹಾಗೂ ಜಾಗತಿಕ ವಿದ್ಯಮಾನಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು. ಭಾರತ-ಸ್ವಿಜರ್ಲೆಂಡ್ ನಡುವೆ 2024ರ ಮಾರ್ಚ್‌ನಲ್ಲಿ ಆಗಿರುವ ಸಮಗ್ರ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಎಪಿಎ)ದಿಂದಾಗಿ ಆರ್ಥಿಕ ಸಹಕಾರದಲ್ಲಿ ಆಗುತ್ತಿರುವ ಏರುಗತಿಯನ್ನು ಉಭಯ ನಾಯಕರು ಉಲ್ಲೇಖಿಸಿದರು.
ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಗೌರವಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಆಯ್ದ ಗಣ್ಯರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ಆಹ್ವಾನಿತರಾಗಿ ಭಾಗಿಯಾಗಿದ್ದರು. ಭಾರತದ 13 ಗಣ್ಯರು ಹಾಗೂ ಸ್ವಿಸ್ ನಿಯೋಗದವರು ಸೇರಿ 40 ಪ್ರಮುಖರು ಔತಣಕೂಟದಲ್ಲಿ ಭಾಗವಹಿಸಿದ್ದರು.

WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.