PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ವಂಟಮೂರಿ ಮಹಿಳೆ‌‌ ವಿವಸ್ತ್ರ ಪ್ರಕರಣ; ಪ್ರೇಮಿಗಳ ಮದುವೆ ಮಾಡಿಸಿದ ಬೆಳಗಾವಿ ಪೊಲೀಸ್‌

 

ಬೆಳಗಾವಿ: ಪ್ರೇಮಿಗಳಿಬ್ಬರು ಓಡಿ ಹೋಗಿದಕ್ಕೆ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದ್ದು, ಈ ಪ್ರಕರಣ ದೇಶಾದ್ಯಂತ ವ್ಯಾಪಿಸಿತ್ತು. ಪ್ರಕರಣಕ್ಕೆ ಕಾರಣವಾಗಿದ್ದ ವಂಟಮೂರಿ ಗ್ರಾಮದ ಪ್ರೇಮಿಗಳಿಗೆ ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಬೆಳಗಾವಿ ಪೊಲೀಸ್‌ ರು ಮದುವೆ ಮಾಡಿದ್ದಾರೆ.

ಪೋಷಕರ ವಿರೋಧದ ನಡುವೆ ಪ್ರೇಮಿಗಳಿಬ್ಬರು ಮುದುವೆ ಮಾಡಿಕೊಳ್ಳುವುದಾಗಿ ಓಡಿ ಹೋಗಿದ್ದರು. ಮಗಳು ಯುವಕನ ಜೊತೆ ಓಡಿ ಹೋದ ವಿಚಾರ ತಿಳಿಯುತ್ತಿದ್ದಂತೆ ಯುವತಿ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ದೌರ್ಜನ್ಯವೆಸಗಿದ್ದರು. ಸಧ್ಯ ಪ್ರಕರಣ ತಿಳಿಗೊಳಿಸಿ

ದುಂಡಪ್ಪ ಅಶೋಕ ನಾಯಕ್ ಎಂಬ ವಂಟಮೂರಿ ಗ್ರಾಮದ ಯುವಕ, ಪ್ರಿಯಾಂಕಾ ಬಸಪ್ಪ ನಾಯಕ್ ಎಂಬ ಯುವತಿಗೆ ರಕ್ಷಣೆ ನೀಡಿ, ಪೊಲೀಸರ ಸಮ್ಮುಖದಲ್ಲಿ ಮದುವೆ ಮಾಡಿಸಲಾಗಿದೆ.

ಇನ್ನು ಮಹಿಳೆಯನ್ನು ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ‌ ಕಾಕತಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.