PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ: ದೂರು ದಾಖಲು

 

ಬೆಳಗಾವಿ : ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಸುತ್ತಿದ್ದ ಅಕ್ಕಿ ವಶಕ್ಕೆ ಪಡೆದು, ದೂರು ದಾಖಲಿಸಿಕೊಳಲಾಗಿದೆ.

ರಾಯಬಾಗ ತಾಲೂಕು ನಿಪನಾಳ ಗ್ರಾಮದ ಲಾರಿ ಚಾಲಕ ಸಂತೋಷ ಶಿವಾಜಿ ಕುರಣಿ (26) ಹಾಗೂ ಹುಕ್ಕೇರಿ ಪಟ್ಟಣದ ರವಿ ಶಿವಾನಂದ ಗಜಬರ ಬಂಧಿತ ಆರೋಪಿಗಳು. ಹುಕ್ಕೇರಿ ವ್ಯಾಪ್ತಿಯ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ೨೧೦ ಕ್ವೀಂಟಲ್ ಅನ್ನಭಾಗ್ಯ ಪಡಿತರ ಅಕ್ಕಿ ವಶಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ರು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 7.14 ಲಕ್ಷ ಮೌಲ್ಯದ 420 ಚೀಲಗಳುಳ್ಳ 210 ಕ್ವೀಂಟಲ್ ಪಡಿತರ ಅಕ್ಕಿ ಹಾಗೂ 15 ಲಕ್ಷ ಬೆಲೆಬಾಳುವ ಲಾರಿ ವಶಪಡಿಸಿಕೊಳ್ಳಲಾಗಿದೆ.

ಹುಕ್ಕೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.