This is the title of the web page
This is the title of the web page

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಎಲ್ಲ ಪಕ್ಷಗಳ ಕೊಡುಗೆ : ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಎಲ್ಲ ಪಕ್ಷಗಳ ಕೊಡುಗೆ : ಮೃತ್ಯುಂಜಯ ಸ್ವಾಮೀಜಿ

1) ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಮಾಜಿ ಶಾಸಕ ವಿನಯ್ ಕುಲಕರ್ಣಿ ಇಬ್ಬರು ಸುಮಾರು ವರ್ಷಗಳಿಂದ ನನ್ನ ಶಿಷ್ಯರು : ಮೃತ್ಯುಂಜಯ ಸ್ವಾಮೀಜಿ

2)“ಕಾಂಗ್ರೆಸ್‌ ನಾಯಕರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಇದೊಂದು ಸುಳ್ಳು ಸುದ್ದಿ ಅಬ್ಬಿಸಿದ್ದಾರೆ ಅಷ್ಟೇ : ಶ್ರೀಗಳು

3) ಪಂಚಮಸಾಲಿ ಮೀಸಲಾತಿ ಹೋರಾಟ ಎಲ್ಲಾ ರಾಜಕೀಯ ಪಕ್ಷಗಳ ಭಾಗವಹಿಸಿದ್ದಾರೆ.

4) ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಬಿಜೆಪಿ ನಾಯಕರಷ್ಟೇ ಅಲ್ಲ, ಕಾಂಗ್ರೆಸ್ ಜೆಡಿಎಸ್ ಎಲ್ಲಾ ಪಕ್ಷಗಳ ನಾಯಕರೂ ಭಾಗಿಯಾಗಿದ್ದರು ಎಂಬುದು ಗಮನದಲ್ಲಿ ಇಟ್ಟುಕೊಳ್ಳಬೇಕು : ಶ್ರೀಗಳು

5) “ಮೀಸಲಾತಿ ಕ್ರೆಡಿಟ್‌ ಬಿಜೆಪಿ ಪಡೆದುಕೊಳ್ಳುತ್ತಿದೆ. ಅದರ ತಕ್ಕಂತೆ ನೀವು ನಡೆದುಕೊಳ್ಳುತ್ತಿದ್ದೀರಿ” ಎಂದು ಸ್ವಾಮೀಜಿಗೆ  ನಾಯಕರು ಸಿಟ್ಟಿನಿಂದಲೇ ಹೇಳಿದ್ದಾರೆ ಅಷ್ಟೇ ಎಂದ ಶ್ರೀಗಳು

6) “ನನಗೆ ಯಾವುದೇ ನಾಯಕರಿಂದ ಜೀವ ಬೆದರಿಕೆ ಕರೆಗಳು ಬಂದಿಲ್ಲ. ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆರೋಪ ಸುಳ್ಳು ಸುದ್ದಿ ಮಾಡಿದ್ದಾರೆ : ಮೃತ್ಯುಂಜಯ ಸ್ವಾಮೀಜಿ

7)  ಪಂಚಮಸಾಲಿ ಮೀಸಲಾತಿ ಹೋರಾಟ ಇಲ್ಲಿಗೆ ನಿಂತಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಪ್ರತಿಭಟನೆ ಹಿಂಪಡೆದಿರುವೆ. ಚುನಾವಣೆ ನಂತರ ಮತ್ತೆ ಮೀಸಲಾತಿ ಹೋರಾಟಕ್ಕೆ ನಾನು ಸಿದ್ಧ” : ಸ್ವಾಮೀಜಿ

8) ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ‘ಮೀಸಲಾತಿಯು ಇಡೀ ಸಮುದಾಯಕ್ಕೆ ಸೇರಿದೆ.

 

ಬೆಳಗಾವಿ:“ಈ ಹಿಂದೆ ಬಿಜೆಪಿಯ ಕೆಲ ನಾಯಕರು ನನ್ನ ಬಗ್ಗೆ ಸಿಟ್ಟಾಗಿದ್ದರು. ಈಗ ಕಾಂಗ್ರೆಸ್ ನಾಯಕರು ಸಿಟ್ಟಾಗಿದ್ದಾರೆ. ಸಮುದಾಯದ ಸ್ವಾಮೀಜಿಯಾಗಿ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವೆ” ಎಂದು ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

“ನನಗೆ ಯಾವುದೇ ನಾಯಕರಿಂದ ಜೀವ ಬೆದರಿಕೆ ಕರೆಗಳು ಬಂದಿಲ್ಲ. ಮೀಸಲಾತಿ ವಿಚಾರವನ್ನು ನಾನು ಒಪ್ಪಿಕೊಂಡಿರುವುದಕ್ಕೆ ಕೆಲವು ನಾಯಕರಿಗೆ ಅಸಮಾಧಾನವಿದೆ. ಸಹಜವಾಗಿ ಸಿಟ್ಟಿನಿಂದ ಅವರು ಮಾತನಾಡುತ್ತಿದ್ದಾರೆ” ಎಂದು ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು. ಸ್ವಾಮೀಜಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ’ ಎಂದು ಬಿಜೆಪಿ ನಾಯಕ ಅರವಿಂದ ಬೆಲ್ಲದ ಸೋಮವಾರ ಆರೋಪಿಸಿದ್ದರು ಅರವಿಂದ ಬೆಲ್ಲದ ಆರೋಪವನ್ನು ಅಲ್ಲಗಳೆದ.ಸ್ವಾಮೀಜಿ.

“ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡಿದ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ನಾಲ್ಕೈದು ನಾಯಕರು ಸ್ವಾಮೀಜಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ” ಎಂದು ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದರು. ಅದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಶ್ರೀಗಳ.

“ಮೀಸಲಾತಿ ಕ್ರೆಡಿಟ್‌ ಬಿಜೆಪಿ ಪಡೆದುಕೊಳ್ಳುತ್ತಿದೆ. ಅದರ ತಕ್ಕಂತೆ ನೀವು ನಡೆದುಕೊಳ್ಳುತ್ತಿದ್ದೀರಿ” ಎಂದು ಸ್ವಾಮೀಜಿಗೆ ಕಾಂಗ್ರೆಸ್‌ ನಾಯಕರು ಸಿಟ್ಟಿನಿಂದಲೇ ಹೇಳಿದ್ದಾರೆ ಎನ್ನಲಾಗಿದೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟ ಮಾತ್ರಕ್ಕೆ ಅದು ಬಿಜೆಪಿಯ ಕೊಡುಗೆ ಅಲ್ಲ ಇದನ್ನು ಎಲ್ಲಾ ಪಂಚಮಸಾಲಿ ಸಮುದಾಯದ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಎಂಬುದು ಸಮುದಾಯದಲ್ಲಿರುವ ಕಾಂಗ್ರೆಸ್ ಧುರೀಣರ ಅಭಿಪ್ರಾಯ ಬಿಜೆಪಿ ನಾಯಕರಷ್ಟೇ ಅಲ್ಲ, ಎಲ್ಲಾ ಪಕ್ಷಗಳ ನಾಯಕರೂ ಭಾಗಿಯಾಗಿದ್ದರು ಎಂಬುದು ಗಮನಾರ್ಹ.

ಈ ಚರ್ಚೆಗಳ ನಡುವೆಯೇ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠ ಧರ್ಮ ಕ್ಷೇತ್ರದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ‘ಮೀಸಲಾತಿಯು ಇಡೀ ಸಮುದಾಯಕ್ಕೆ ಸೇರಿದೆ.

ರಾಜಕೀಯ ಪಕ್ಷಗಳಲ್ಲಿರುವ, ನಮ್ಮ ಸಮುದಾಯದ ನಾಯಕರು ಅವರ ಅವರ ಅಭಿಪ್ರಾಯಗಳನ್ನು ಹಾಗೂ ವಿಚಾರಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ನಮಗೆ ತಿಳಿಸಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡಿರುವ ಶ್ರೀಗಳು, ‘ಎಲ್ಲರ ಗುರಿಯೂ ಸಮಾಜದ ಏಳಿಗೆಯೇ ಆಗಿದ್ದು, ನಾವೆಲ್ಲರೂ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕಿದೆ’ ಎಂದು ಸಮಾಜಕ್ಕೆ ಅರ್ಥಪೂರ್ಣ ಸಲಹೆ ನೀಡಿದ್ದಾರೆ. ನಮ್ಮ ಸಮುದಾಯದ ತಳಮಟ್ಟದ ವ್ಯಕ್ತಿಯ ಅಭ್ಯುದಯಕ್ಕಾಗಿ ನಾವು ಚಿಂತಿಸಬೇಕಾಗಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ.