ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಗುರುವಾರ ಊಟದ ನೆಪದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಸಮಾಲೋಚನೆ ನಡೆದಿದ್ದು, ರಾಜ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಕೆಲ ದಿನಗಳ ಹಿಂದಷ್ಟೇ ಪರಮೇಶ್ವರ್ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದರು. ಸಿದ್ದರಾಮಯ್ಯರ ಮುಂದೆಯೂ ಸಮಾಲೋಚನೆ ನಡೆಸಿದ್ದರು. ಇದೀಗ ಸಿಎಂ, ಡಿಸಿಎಂ ದೆಹಲಿಗೆ ತೆರಳಿರುವ ಬೆನ್ನಲ್ಲೆ ಸಭೆ ನಡೆಸಿದ್ದಾರೆ. ನಿನ್ನೆ ರಾತ್ರಿಯಷ್ಟೇ ಏರ್ಪೋರ್ಟ್ನಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿ ಸತೀಶ್ ಜಾರಕಿಹೊಳಿ ವಾಪಸ್ ಆಗಿದ್ದರು.
ಇನ್ನು ಸಭೆ ಬಗ್ಗೆ ಡಾ.ಹೆಚ್ ಸಿ ಮಹದೇವಪ್ಪ ಮಾತನಾಡಿ.. ಊಟಕ್ಕೆ ಕರೆದಿದ್ದರು ಬಂದಿದ್ದೇವೆ. ಒಳ್ಳೆ ಊಟ ಕೊಟ್ಟರು ಮಾಡಿದ್ದೇವೆ. ನಾಲ್ಕೈದು ದಿನದ ಹಿಂದೆ ಊಟಕ್ಕೆ ಆಹ್ವಾನ ಮಾಡಿದ್ದರು ಹಾಗಾಗಿ ಬಂದೆ. ಉಳಿದವರು ಯಾವ ಕಾರಣಕ್ಕೆ ಬಂದಿದ್ದರೋ ಗೊತ್ತಿಲ್ಲ. ನಾನಂತು ಊಟಕ್ಕೆ ಆಹ್ವಾನ ಮಾಡಿದ್ದರು ಬಂದೆ. ಕ್ಷೇತ್ರದ ಕೆಲ ಕೆಲಸದ ಬಗ್ಗೆ ಮಾತನಾಡಿದ್ದೇನೆ ಅಷ್ಟೇ. ಬೇರೆ ವಿಚಾರ ಗೊತ್ತಿಲ್ಲ ಎಂದರು.