ಪಿಎಂ ಕುಸುಮ್-ಸಿ ಯೋಜನೆಯಡಿ 3000 ಮೆ.ವ್ಯಾ. ಸಾಮಥ್ರ್ಯದ ಸೌರ ಯೋಜನೆಗಳ : ಸಚಿವ ಕೆ. ಜೆ. ಜಾರ್ಜ್

ಪಿಎಂ ಕುಸುಮ್-ಸಿ ಯೋಜನೆಯಡಿ 3000 ಮೆ.ವ್ಯಾ. ಸಾಮಥ್ರ್ಯದ ಸೌರ ಯೋಜನೆಗಳ : ಸಚಿವ ಕೆ. ಜೆ. ಜಾರ್ಜ್

ಬೆಳಗಾವಿ ಸುವರ್ಣ ವಿಧಾನಸೌಧ ಡಿ.16: ಪಿಎಂ ಕುಸುಮ್-ಸಿ ಯೋಜನೆಯಡಿ ರಾಜ್ಯಕ್ಕೆ ಒಓಖಇ ಯಿಂದ ಹಂಚಿಕೆಯಾಗಿರುವ ಪಂಪ್‍ಸೆಟ್‍ಗಳಿಗೆ ಅನುಗುಣವಾಗಿ ಸುಮಾರು 3000 ಮೆ.ವ್ಯಾ. ಸಾಮಥ್ರ್ಯದ ಸೌರ ಯೋಜನೆಗಳನ್ನು ಅನುμÁ್ಠನಗೊಳಿಸಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ತಿಳಿಸಿದ್ದಾರೆ.

ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಟಿ. ಎನ್. ಜವರಾಯಿ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ್ದಾರೆ.

ರಾಜ್ಯದಲ್ಲಿ ಪಿ. ಎಂ. ಕುಸುಮ್ ಯೋಜನೆಯಲ್ಲಿ ಪ್ರಸ್ತುತ 415 ಸ್ಥಳಗಳಲ್ಲಿ 2592 ಮೆ.ವ್ಯಾ. ಸಾಮಥ್ರ್ಯದ ಯೋಜನೆಗಳಿಗೆ ಕಾರ್ಯಾದೇಶ ನೀಡಲಾಗಿದೆ ಮತ್ತು ಬಾಕಿ ಉಳಿದ ಸುಮಾರು 410ಮೆ.ವ್ಯಾ. ಸಾಮಥ್ರ್ಯಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಕಾರ್ಯಾದೇಶ ನೀಡಲಾಗಿರುವ ಯೋಜನೆಗಳಲ್ಲಿ 213ಮೆ.ವ್ಯಾ. ಸಾಮಥ್ರ್ಯದ ಯೋಜನೆಗಳು ಅನುμÁ್ಠನಗೊಂಡಿದ್ದು, 1190ಮೆ.ವ್ಯಾ. ಸಾಮಥ್ರ್ಯದ ಯೋಜನೆಗಳು ಪ್ರಗತಿಯಲ್ಲಿದ್ದು ಮತ್ತು 1189ಮೆ.ವ್ಯಾ. ಸಾಮಥ್ರ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದಂತೆ ಇರುವ ಅಡಚಣೆಗಳನ್ನು ನಿವಾರಿಸಲು ಕಾಲ-ಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಅವಶ್ಯವಿರುವ ಖಾಸಗಿ/ಸರ್ಕಾರಿ ಜಮೀನು ದೊರೆಯದಿದ್ದ ಪಕ್ಷದಲ್ಲಿ, ಕೆರೆ ಅಂಗಳದ ಜಮೀನುಗಳನ್ನು ಗುರುತಿಸಿ. ಯೋಜನೆಗಳನ್ನು ಅನುμÁ್ಠನಗೊಳಿಸಲು ಸಂಬಂಧಪಟ್ಟ ಪ್ರಾಧೀಕಾರದಿಂದ ಅನುಮೋದನೆ ಪಡೆದು ಪರಿಸರಕ್ಕೆ ಹಾನಿಯಾಗದಂತೆ ಕೈಗೆತ್ತಿಕೊಳ್ಳಲಾಗಿದೆ.

ಉಪಕೇಂದ್ರಗಳ ಬಳಿ ಸೂಕ್ತ ಸರ್ಕಾರಿ ಜಮೀನು ಲಭ್ಯವಿರುವ ಸ್ಥಳಗಳಲ್ಲಿ ಸರ್ಕಾರಿ ಜಮೀನನ್ನು ಈ ಯೋಜನೆಗೆ ಕಾಯ್ದಿರಿಸಲು ಈಗಾಗಲೇ ಕಂದಾಯ ಹಾಗೂ ಇಂಧನ ಇಲಾಖೆಗಳಿಂದ ಜಂಟಿ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸಿದ ಸರ್ಕಾರಿ ಜಮೀನಗಳಿಗೆ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ರೂ.25,000/- ನಿಗಧಿಪಡಿಸಿ ಪ್ರತಿ 2 ವರ್ಷಗಳಿಗೊಮ್ಮೆ 5%* escalation on base rate ರಂತೆ ಸೌರ ಅಭಿವೃದ್ಧಿದಾರರಿಂದ ನಿಗಧಿತ ಉಪಯೋಗ ದರ (Right of Use Rates)ಸಂಗ್ರಹಿಸಿ, ಸಂಗ್ರಹವಾದ ಹಣದಿಂದ LADF  ನಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ