This is the title of the web page
This is the title of the web page

ಉಕ್ಕಿ ಹರಿಯುತ್ತಿರುವ ಘಟಪ್ರಭೆ, ನಡುಗಡ್ಡೆಯಾದ ಮಸಗುಪ್ಪಿ ಗ್ರಾಮ

ಉಕ್ಕಿ ಹರಿಯುತ್ತಿರುವ ಘಟಪ್ರಭೆ, ನಡುಗಡ್ಡೆಯಾದ ಮಸಗುಪ್ಪಿ ಗ್ರಾಮ

ಮೂಡಲಗಿ: ಪಶ್ಚಿಮ ಘಟ ಹಾಗೂ ಬೆಳಗಾವಿಯ ಭಾಗದಲ್ಲಿ
ಸುರಿಯುತ್ತಿರವ ಮಳೆಯಿಂದ ಹಿಡಕಲ್ ಜಲಾಶಯ ಹಾಗೂ ಹಿರಣ್ಯಕೇಶ ಮತ್ತು
ಮಾರ್ಕಂಡೆಯ ನದಿಯಿಂದ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿರು ಹಿನ್ನೆಲೆಯಲ್ಲಿ
ರವಿವಾರಂದು ಮೂಡಲಗಿ ತಾಲೂಕಿನ ಮಸಗುಪ್ಪಿ ಮತ್ತು ಪಟಗುಂದಿ ಗ್ರಾಮ
ಜಲಾವೃತಗೊಂಡು ನಡಗಡ್ಡೆಯಾದಂತಾಗಿದೆ.
ತಾಲೂಕಿನ ನದಿಯ ದಡದಲ್ಲಿ ಸಾವಿರಾರು ಏಕರೆ ಕಬ್ಬು, ಗೋವಿಜೋಳ. ಕೈಪಲ್ಲೆ
ಬೆಳೆಗಳು ಜಲಾವೃತಗೊಂಡಿವೆ. ತಾಲೂಕಿನಲ್ಲಿ ಮುಖ್ಯ ರಸ್ತೆಗಳು ಜಲಾವೃತಗೊಂಡ
ಪರಿಣಾಮ ಜನರು ಪರದಾಡುವಂತಾಗಿದೆ.
ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಮೂಡಲಗಿ
ತಾಲ್ಲೂಕು ಆಡಳಿತವು ಆರಂಭಿಸಿದ ಕಾಳಜಿ ಕೇಂದ್ರದಲ್ಲಿ ಮೂಡಲಗಿ ತಾಲೂಕಿನಲ್ಲಿ
ಮಸಗುಪ್ಪಿ-೧, ಹುಣಶ್ಯಾಳ ಪಿಜಿ-೪, ವಡೇರಹಟ್ಟಿ-೧, ಪಟಗುಂದಿ-೧, ಮುನ್ಯಾಳ-೧, ಹುಣಶ್ಯಾಳ
ಪಿವೈ-೧, ಸುಣಧೋಳಿ-೧ ಧರ್ಮಟ್ಟಿ-೧ ಒಟ್ಟು ೧೨ ಕಾಳಜಿ ಕೇಂದ್ರಗಳನ್ನು ತೇರೆದು ೩೧೯
ಸಂತ್ರಸ್ತರ ಕುಟುಂಬದ ೧೧೯೮ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷಿö್ಮÃ ದೇವಸ್ಥಾನ, ಪಟಗುಂದಿಯ ಜಡಿಸಿದ್ಧೇಶ್ವರ,
ಹನಮಂತ ದೇವವರ, ಲಕ್ಷಿö್ಮÃ ದೇವಿ, ಬಸವಣ್ಣ ದೇವರ, ಸುಣಧೋಳಿಯ
ಜಡಿಸಿದ್ಧೇಶ್ವರ ದೇವಸ್ಥಾನ, ಹುಣಶ್ಯಾಳ ಪಿವೈಯದ ಹಮಂತ ದೇವರು, ಮುನ್ಯಾಳ
ಲಕ್ಷಿö್ಮÃ ದೇವಿ, ಕಮಲದಿನ್ನಿ ಲಕ್ಷಿö್ಮÃ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳ
ಜಲಾವೃತಗೊಂಡಿವೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರು ನದಿ ತೀರದ
ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸುರಕ್ಷಿತವಾದ ಸ್ಥಳಗಳಿಗೆ
ಹೋಗುವಂತೆ ಮತ್ತು ಕಾಳಜಿ ಕೇಮದ್ರದಲ್ಲಿ ಉಳಿಯಲು ಮನವಿ
ಮಾಡಿಕೊಳ್ಳುತ್ತಿದ್ದಾರೆ.