This is the title of the web page
This is the title of the web page

ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಿ ಜಿಪಂ ಸಿಇಒ ಹರ್ಷಲ್ ಭೊಯರ್ ಸೂಚನೆ ಬಹುಗ್ರಾಮ ಕುಡಿಯುವ ನೀರಿನ ಘಟಕ ಪರಿವೀಕ್ಷಣೆ

ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಿ ಜಿಪಂ ಸಿಇಒ ಹರ್ಷಲ್ ಭೊಯರ್ ಸೂಚನೆ ಬಹುಗ್ರಾಮ ಕುಡಿಯುವ ನೀರಿನ ಘಟಕ ಪರಿವೀಕ್ಷಣೆ

 

ಬೆಳಗಾವಿ: ಮುಂಗಾರು ಮಳೆ ವಿಳಂಬವಾಗುತ್ತಿರುವುದರಿಂದ ಮಲಪ್ರಭಾ ನದಿ ನೀರು ಖಾಲಿಯಾಗುತ್ತಿದೆ. ನೀರು ಖಾಲಿಯಾಗುವ ಮುನ್ನವೇ ಮುಂಜಾಗ್ರತೆ ವಹಿಸಬೇಕು. ಎಲ್ಲ ಹಳ್ಳಿಗಳಲ್ಲೂ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಕಲ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ಹರ್ಷಲ್ ಭೋಯರ್ ಹೇಳಿದರು.
ಎಂಕೆ ಹುಬ್ಬಳ್ಳಿ ಸಮೀಪ ಮಲಪ್ರಭಾ ನದಿಯ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ನದಿಯಲ್ಲಿ ಮಳೆ ನೀರು ಸಂಗ್ರಹವಾಗುವದು ಇನ್ನೂ ತಡವಾಗಬಹುದು. ಹೀಗಾಗಿ, ಕೂಡಲೇ ಕಿತ್ತೂರು ಹಾಗೂ ಇತರೆ 13 ಹಳ್ಳಿ ಮತ್ತು ಹೂಲಿಕಟ್ಟಿ ಹಾಗೂ ಇತರೆ ಆರು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ತ್ವರಿತವಾಗಿ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಲಪ್ರಭಾ ನದಿಯಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಘಟಕದ ಪರಿವೀಕ್ಷಣೆ ಮಾಡಿದ ಅವರು, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಲಪ್ರಭಾ ನದಿಯಿಂದ ಇನ್ನೂ 15 ದಿನ ನೀರು ಸರಬರಾಜು ಮಾಡಲು ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಂಡ ಅವರು, ನೀರಿನ ಸಮಸ್ಯೆ ಇರುವ ಕತ್ರಿದೊಡ್ಡಿ ಹಾಗೂ ಕುಲವಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ನೀರು ಸರಬರಾಜಿಗೆ ಆಗಿರುವ ತೊಂದರೆ ಬಗ್ಗೆ ಚರ್ಚಿಸಿದರು.
ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ವಿರುವ ಬೋರವೆಲ್‌ಗಳ ಮೋಟರ್‌ಗಳನ್ನು ತಕ್ಷಣವೇ ದುರಸ್ತಿ ಮಾಡಿಸಿಕೊಂಡು, ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು. ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾದರೇ ಸ್ಥಳೀಯ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚನ್ನಮ್ಮ ಕಿತ್ತೂರು ತಾಲೂಕು ಪಂಚಾಯಿತಿ ಇಒ ಸುಭಾಷ್ ಸಂಪಗಾಂವಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕರ ಅಭಿಯಂತ ಶಶಿಕಾಂತ ನಾಯಕ, ಎಇಇ ಪ್ರವೀಣ ಮಠಪತಿ, ಎಸ್.ಎಂ.ಪಾಟೀಲ, ಗ್ರಾಪಂ ಅಧ್ಯಕ್ಷ ಭೀಷ್ಠಪ್ಪ ಶಿಂಧೆ, ಪಿಡಿಒ ರಾಧಾ, ಸೇರಿದಂತೆ ಗ್ರಾಪಂ ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ,ಸದಸ್ಯರು ಇದ್ದರು.