This is the title of the web page
This is the title of the web page

ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುತ್ತಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಬಲೆಗೆ

ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುತ್ತಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಬಲೆಗೆ

ರಾಯಬಾಗ:ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುತ್ತಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯತಿ ಪಿಡಿಒ ಸದಾಶಿವ ಜಯಪ್ಪ ಕರಗಾರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ನಾಗರಾಳ ಗ್ರಾಮದ ಗಂಗವ್ವ ಹಣಮಂತ ಕೆಂಗನ್ನವರ ಹಸರಿನಲ್ಲಿರುವ ರಿ.ಸ.ನಂ 1/2 ನಿಡಗುಂದಿ ಗ್ರಾಪಂ ವಿಪಿಸಿ ನಂ 146/1 ಮನೆಗೆ ಸಂಬಂಧಿಸಿದ ಇ-ಸ್ವತ್ತು ಆಸ್ತಿ ನಮೂನೆ 9 ಮತ್ತು 11 ನೀಡಲು ₹ 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಗಂಗವ್ವ ಕೆಂಗನ್ನವರ ಪುತ್ರ ಅಪ್ಪಾಸಾಬ @ ಅಪ್ಪಣ್ಣಾ ಹಣಮಂತ ಕೆಂಗನ್ನವರ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ರಾಯಬಾಗ ಪಟ್ಟಣದ ಸತ್ಯಗೌಡ ಭೈರಪ್ಪ ಕಿತ್ತೂರೆ ಇವರ ಮನೆಯಲ್ಲಿ ದೂರುದಾರ ಅಪ್ಪಾಸಾಬ ಕೆಂಗನ್ನವರ ಬಳಿಯಿಂದ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನಮಂತರಾಯ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎ. ಆರ್. ಕಲಾದಗಿ, ಆರ್.ಎಲ್.ಧರ್ಮಟ್ಟಿ, ನಿರಂಜನ ಪಾಟೀಲ, ಸಿಬ್ಬಂದಿ ಎಲ್.ಎಸ್‌. ಹೊಸಮನಿ, ವಿಜಯ ಬಿರಾಜನವರ, ರವಿ ಮಾವರಕರ, ಆರ್.ಬಿ.ಗೋಕಾಕ, ಸಂತೋಷ ಬೆಡಗ, ಗಿರೀಶ ಪಾಟೀಲ ಕಾರ್ಯಾಚರಣೆಯಲ್ಲಿ ಭಾಗಹಿಸಿದ್ದರು.