ಸುರೇಶ ನೇಲ್ಲಿ೯
ಬೆಳಗಾವಿ: ರಾಜ್ಯ ವಿಧಾನ ಕದನಲ್ಲಿ 124 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಪೈನಲ್ ಆಗಿದ್ದು, ಬಹುತೇಕ ಕ್ಷೇತ್ರದ ಪಟ್ಟಿಯಲ್ಲಿ ಲಿಂಗಾಯತರಿಗೆ ಸಿಂಹಪಾಲು ನೀಡಲಾಗಿದೆ. 124 ಅಭ್ಯರ್ಥಿಗಳ ಪೈಕಿ 32 ಲಿಂಗಾಯಿತರಿಗೆ ಟಿಕೆಟ್ ಘೋಷಣೆಯಾಗಿದೆ.
ಈಗಾಗಲೇ ಲಿಂಗಾಯತ ಸಮುದಾಯ ಮೀಸಲಾತಿಯಲ್ಲಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸಮುದಾಯದ ಜನರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಜಾಣ ನಡೆ ಇಟ್ಟಿದ್ದು, ರಾಜ್ಯ ದಕ್ಷಿಣ ಭಾಗದಲ್ಲಿ ಕಾಯ್ದು ನೋಡುವ ತಂತ್ರಕ್ಕೆ ಕಾಂಗ್ರೆಸ್ ಕೈ ಹಾಕಿದೆ.
ಪಕ್ಕಾ ಲೆಕ್ಕಾಚಾರ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಲಿಂಗಾಯಿತರು ಸಿಂಹಪಾಲು ಪಡೆದುಕೊಂಡಿದ್ದಾರೆ. 32 ಮಂದಿ ವೀರಶೈವ ಲಿಂಗಾಯಿತರು, ರೆಡ್ಡಿ ಒಳಗೊಂಡಂತೆ 25 ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಲಾಗಿದೆ. 22 ಜನ ಪರಿಶಿಷ್ಟ ಜಾತಿ, 10 ಜನ ಪರಿಶಿಷ್ಟ ಪಂಗಡ, 5 ಜನ ಬ್ರಾಹ್ಮಣ, 5 ಜನ ಕುರುಬ ಸಮುದಾಯ, ನಾಲ್ವರು ಈಡಿಗ ಸಮುದಾಯ, 8 ಜನ ಮುಸ್ಲಿಂ, ಮರಾಠ 2, ರಜಪೂತ್ 2, ಇತರೆ 7 ಹಾಗೂ ಒಬ್ಬರು ಕ್ರಿಶ್ಚಿಯನ್ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾಗಿದೆ.
ರಾಜ್ಯದಲ್ಲಿರುವ ಪ್ರಭಾವಿ ಲಿಂಗಾಯತ ಸಮುದಾಯದ ಜನರಿಗೆ ಟಿಕೆಟ್ ನೀಡಿದರೆ ಪ್ರತಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಸಾಧಿಸುವ ಸಾಧ್ಯತೆ ಇದೆ. ಈ ಭಾಗದಲ್ಲಿ ಕೆಲವೊಂದು ಲಿಂಗಾಯತ ಸಮುದಾಯದ ಜನರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಈ ಲೆಕ್ಕಾಚಾರದ ಮೇಲೆ ಕಾಂಗ್ರೆಸ್ ದಾಳ ಉರುಳಿಸಿದ್ದು, ಒಟ್ಟಿನಲ್ಲಿ ಲಿಂಗಾಯತ ಸಮುದಾಯಕ್ಕೆ ಮಣೆಹಾಕಿದೆ ಎನ್ನಲಾಗಿದೆ.
ಕಳೆದ ಚುನಾವಣೆಗಿಂತ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ರಣತಂತ್ರ ರೂಪಿಸಿದ್ದು, ಕಾಂಗ್ರೆಸ್ ಭರವಸೆ ಹಾಗೂ ಟಿಕೆಟ್ ಘೋಷಣೆಯಿಂದ ಕಾಂಗ್ರೆಸ್ ಗೆ ಮುನ್ನಡೆಯಾಗುವ ಸಾಧ್ಯತೆ ಇದೆ.