– ಹುಕ್ಕೇರಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ವರುಣನ ಸತತ ಸುರಿಯುತ್ತಿರುವ ಮಳೆಯಿಂದ ಹುಕ್ಕೇರಿ ತಾಲೂಕಿನಲ್ಲಿ ಹಾಯ್ದು ಹೋಗಿರುವ ನದಿಗಳಾದ ಹಿರಣ್ಯಕೇಶಿ, ಘಟಪ್ರಭಾ, ಮಾರ್ಕಂಡೇಯ ನದಿಗಳಲ್ಲಿ ನೀರು ಏರಿಕೆಯಾಗುತ್ತಿದೆ. ಹಾಗಾಗಿ ತಾಲೂಕಿನ ನದಿ ದಟದ ವ್ಯಾಪ್ತಿಯ ಗ್ರಾಮಗಳಲ್ಲಿ ನೆರೆ ಭೀತಿ ಉಂಟಾಗಿದೆ.
ಕಳೆದÀ ಎರಡು ತಿಂಗಳಿನಿAದ ಮಳೆರಾಯನ ಮುನಿಸುದಿಂದ ಒಂದು ಹಳ್ಳ ಹರಿಯಲಿಲ್ಲ ಒಡ್ಡು ತುಂಬದೆ ಬೆಳೆಗ¼ ಬೇರು ಗಟ್ಟಿಯಾಗಿರಲ್ಲಿಲ್ಲ ಆದರೂ ಆಗಾಗ ಜಿಟಿ ಜಿಟಿ ಮಳೆಯಿಂದ ಒಣಗದೆ ಜೀಓವ ಹಿಡಿದುಕೊಂಡಿವೆ
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಚಿತ್ರಿ ಮತ್ತು ಜಲಾಯಶದಿಂದ ಯಾವುದೇ ಕ್ಷಣದಲ್ಲಿ ನೀರು ಹರಿಬಿಟ್ಟಲ್ಲಿ ಇಲ್ಲಿನ ನದಿಗಳು ಅಪಾಯಮಟ್ಟ ಮೀರಿ ಹರಿಯಲಿವೆ. ಇದರಿಂದ ನದಿ ಪಾತ್ರದ ಜನರು ಪ್ರವಾಹ ಎದುರಿಸುವ ಆತಂಕದಲ್ಲಿದ್ದಾರೆ.
ಕಳೆದ ಒಂದು ನಾಲೈದು ದಿನದಿಂದ ಸತತ ಮಳೆಯಿಂದಾಗಿ ಮಾರ್ಕಂಡೇಯ ಜಲಾಶಯವು ಭರ್ತಿಯಾಗಿದೆ ಶಿರೂರ ಡ್ಯಾಮ್ ಭರ್ತಿಯಾಗಿದ್ದರಿಂದ ೧ ಸಾವಿರ ಕ್ಯುಸೆಕ್ಸ್ ನೀರು ಹೊರಬೀಡಲಾಗಿದೆ. ಇನ್ನು ಹಿಡಕಲ್ (ರಾಜಾ ಲಖಮಗೌಡ) ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಹಿರಣ್ಯಕೇಶಿ ನದಿ ನೀರು ಬಡಕುಂದ್ರಿ ಹೊಳೆಮಾ ದೇವಸ್ಥಾನದ ಸನಿಹಕ್ಕೆ ಹೋಗಿದೆ. ನದಿ ನೀರು ಅಕ್ಕಪಕ್ಕದ ಹೊಲ ಗದ್ದೆಗಳಿಗೆ ನುಗ್ಗುತ್ತಿz.ೆ ಹಿರಣ್ಯಕೇಶಿ ನದಿ ದಡದ ಕೃಷಿ ಪ್ರದೇಶಕ್ಕೆ ನೀರಿನಲ್ಲಿ ಮುಳುಗಡೆಯಾದರೆ ಪ್ರಮುಖವಾ
ಇಲ್ಲಿ ಬಿತ್ತನೆ ಮಾಡಿರುವ ಸೋಯಾಬೀನ್ ಬೆಳೆ ನಾಶವಾಗಿ ರೈತರು ನಷ್ಟ ಅನುಭವಿಸುವದು ನಿಶ್ಚಿತ,
ಹಿರಣ್ಯಕೇಶಿ ನದಿಗೆ ಅಡ್ಡಲಾಗಿರುವ ಕುರಣಿ-ಕೋಚರಿ, ಯರನಾಳ-ಮದಮಕ್ಕನಾನ ಸಂಪರ್ಕ ಸೇತುವೆಗಳು ಈಗಾಗಲೇ ಮುಳುಗಡೆಯಾಗಿದ್ದು, ೫ ಸೇತುವೆಗಳು ಮುಳುಗಡೆ ಹಂತದಲ್ಲಿವೆ. ದಡ್ಡಿ-ರಾಜಗೋಳಿ ಸಂಪರ್ಕ ಕಲ್ಪಿಸುವ ಸೇತುವೆಗಳು ಈಗಾಗಲೇ ಜಲಾವೃತಗೊಂಡಿದ್ದು ಇನ್ನುಳಿದ ೪ ಮಾರ್ಗಗಳು ಯಾವುದೇ ಸಂದರ್ಭದಲ್ಲಿಜಲಾವೃತಗೊಳ್ಳಲಿದೆ. ಹಾಗಾಗಿ ಈ ಮಾರ್ಗಗಳಲ್ಲಿ ಜನ ಹಾಗೂ ವಾಹನ ಸಂಚಾರ ನಿಷೇಧಿಸಲಾಗಿದೆ.
ಜಿಟಿಜಿಟಿ ಮಳೆಯ ವಾತಾವರಣ ಸಂಪೂರ್ಣ ಬದಲಾಗಿದ್ದು ಸಂಕೇಶ್ವರ ಪಟ್ಟಣದ ಶಂಕರಲಿಗ ದೇವಸ್ಥಾನ, ನದಿಗಲ್ಲಿ, ಮಠಗಲ್ಲಿ, ಕಂಬಾರ ಗಲ್ಲಿಯಲ್ಲಿ ನೀರು ನುಗ್ಗುವ ಲಕ್ಷ಼ಣ ಕಾಣುತ್ತಿದೆ. ಮುನ್ನಚ್ಚರಿಕೆ ಕ್ರಮವಾಗಿ ನದಿ ದಡದ ನಿವಾಸಿಗಳಿಗೆ ಸುರಕ್ಷಿತಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.
ಜಾಗ್ರತೆ.
ತಹಸೀಲ್ದಾರ್ ಮಂಜುಳಾ ನಾಯಕ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡವು ಸಂಕೇಶ್ವರ, ದಡ್ಡಿ, ಹಿಡಕಲ್ ಡ್ಯಾಮ್, ಯರನಾಳ, ಪಾಶ್ಚಾಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಹಿರಣ್ಯಕೇಶಿ ನದಿ ಪಾತ್ರದ ೨೬ ಹಳ್ಳಿಗಳು, ಮಾರ್ಕಂಡೇಯ ನದಿ ತೀರದ ೪ ಗ್ರಾಮಗಳ ಜನರ ಜೀವನ ಹೈರಾಣಾಗಿತ್ತು. ಈ ಹಿನ್ನಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ನಿಭಾಯಿಸಲು ತಾಲೂಕು ಆಡಳಿತ ಮುನ್ನಚ್ಚರಿಕೆ ಕ್ರಮವಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿವಿಧ ಕಡೆಗಳಲ್ಲಿ ೪೪ ಪರಿಹಾರ
ಕಾಳಜಿ) ಕೇಂದ್ರ, ೨೭ ಗೋಶಾಲೆ ತೆರೆಯಲು ಎಲ್ಲ ಕ್ರಮ ವಹಿಸಲಾಗಿದೆ.
ಹುಕ್ಕೇರಿ ತಾಲೂಕಿನಲ್ಲಿ ಸಂಭವನೀಯ ಪ್ರವಾಹ ಎದುರಿಸಲು ತಾಲೂಕು ಆಡಳಿತ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಮುನ್ನಚ್ಚರಿಕೆಯಾಗಿ ಹಲವು ಕ್ರಮ ವಹಿಸಿದೆ. ನೆರೆ ಹಾವಳಿ ಎದುರಿಸಲು ಯಾವುದೇ ಹಣಕಾಸಿನ ತೊಂದರೆಯಿಲ್ಲ.
ಮಂಜುಳಾ ನಾಯಕ, ತಹಸೀಲ್ದಾರ್