ಲಂಬಾಣಿ ತಾಂಡಾದೊಳಗೆ ಬಿಜೆಪಿ ಮುಖಂಡರಿಗೆ ಪ್ರವೇಶ ನಿಷೇಧ ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ

ಲಂಬಾಣಿ ತಾಂಡಾದೊಳಗೆ ಬಿಜೆಪಿ ಮುಖಂಡರಿಗೆ ಪ್ರವೇಶ ನಿಷೇಧ ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ

 

ಬಾಗಲಕೋಟೆ: ಲಂಬಾಣಿ ತಾಂಡಾದಲ್ಲಿ ಯಾವ ಬಿಜೆಪಿ ಎಮ್​ಎಲ್​ಎ ಹಾಗೂ ಬಿಜೆಪಿ ನಾಯಕರನ್ನು ಒಳಗೆ ಬಿಡುವುದಿಲ್ಲ. ಬಿಜೆಪಿ ಸರಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಹುನಗುಂದ ತಾಲೂಕಿನ ಅಮೀನಗಢ ತಾಂಡಾದಲ್ಲಿ  ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ ಲಂಬಾಣಿ ತಾಂಡಾದೊಳಗೆ ಬಿಜೆಪಿ ರಾಜಕೀಯ ಮುಖಂಡರಿಗೆ ಪ್ರವೇಶ ನಿಷೇಧ ಹೇರಿದ್ದಾರೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದಲ್ಲಿ ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಕಟ್ಟಿದ್ದ ಬಿಜೆಪಿ ಧ್ವಜ ತೆರವುಗೊಳಿಸಿ ಲಂಬಾಣಿ ಸಮುದಾಯಕ್ಕೆ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿ ಸರಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಹಾಗೂ ನಮ್ಮ ತಾಂಡಕ್ಕೆ ಬಿಜೆಪಿ ರಾಜಕೀಯ ಮುಖಂಡರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಹುನಗುಂದ ತಾಲೂಕಿನ ಅಮೀನಗಢ ತಾಂಡಾದಲ್ಲಿ ಕರ್ನಾಟಕ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಒಳಮೀಸಲಾತಿ ಹಿಂಪಡೆಯಬೇಕು ಎಂದು ಲಂಬಾಣಿ ಜನರು ಬ್ಯಾನರ್ ಅಂಟಿಸಿದ್ದಾರೆ.

ಅಚನೂರು, ನೀಲಾನಗರ, ಜಡ್ರಾಮನಕುಂಟೆ, ಲವಳೇಶ್ವರ, ಗುಲಬಾಳ, ಶಿರಗುಪ್ಪಿ ತಾಂಡಾ, ಬೀಳಗಿ ತಾಲೂಕಿನ ಸುನಗ ತಾಂಡಾ ಸೇರಿದಂತೆ ವಿವಿಧ ತಾಂಡಾಗಳಲ್ಲಿ ಬಿಜೆಪಿ ಬ್ಯಾನರ್ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.