ಸವದಿ ಕಾಂಗ್ರೆಸ್ಸೇರುವುದು ಪಕ್ಕಾ.. ಸುವರ್ಣ ಲೋಕ ಆಂತರಿಕ ವಿಶ್ಲೇಷಣೆ ಸ್ಟೋರಿಗೆ ನಿಖರ ಮಾಹಿತಿ
ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಕಡೆಯಿಂದ ಆಹ್ವಾನ
ಬೆಳಗಾವಿ: ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಈಗ ಬೇಸರಗೊಂಡಿದ್ದಾರೆ. ಬಿಜೆಪಿ ಬಿಡುವ ಬಗ್ಗೆ ಚಿಂತನೆ ನಡೆಸಿದ ಅವರು, ಇದೀಗ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ. ನಾಳೆ ಅವರು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಅಥಣಿಯಲ್ಲಿ ಮಾತನಾಡಿರುವ ಲಕ್ಷ್ಮಣ ಸವದಿ, ನಾಳೆ ನಾನು ಸಭಾಪತಿಯವರನ್ನು ಭೇಟಿಯಾಗುತ್ತಿದ್ದೇನೆ. ನನ್ನ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಪಕ್ಷಾಂತರದ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಕಡೆಯಿಂದ ಆಹ್ವಾನವಿದೆ. ಆದ್ರೆ ನಾನು ಮೊದಲು ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ನಂತರ ಯಾವ ಪಕ್ಷಕ್ಕೆ ಹೋಗಬೇಕು ಎಂದು ತೀರ್ಮಾನಿಸುತ್ತೇನೆ ಎಂದಿದ್ದಾರೆ.
ಇದಕ್ಕೂ ಮೊದಲು ಸುವರ್ಣ ಲೋಕ ದಿನಪತ್ರಿಕೆಯಲ್ಲಿ ಆಂತರಿಕ ವಿಶ್ಲೇಷಣೆ ಮಾಡಲಾಗಿದ್ದು, ಸವದಿಯವರು ಕಾಂಗ್ರೆಸ್ ಸೇರುವುದು ಪಕ್ಕಾ ಎನ್ನಲಾಗಿದೆ. ರಾಜೀನಾಮೆ ಬಳಿಕ ಮಹತ್ವದ ಬೆಳವಣಿಗೆಯಾಗಲಿದೆ.





























