ಮಹತ್ವದ ಸಂದೇಶ ರವಾನಿಸಿದ ಎಚ್‌ ಡಿಕೆ ; ಷರತ್ತು ಒಪ್ಪಿದ್ರೆ ಮೈತ್ರಿಗೆ ಸಿದ್ಧ ರಾಷ್ಟೀಯ ಪಕ್ಷಗಳಿಗೆ ಚೆಂಡು ಎಸೆದ ಕುಮಾರಸ್ವಾಮಿ

ಮಹತ್ವದ ಸಂದೇಶ ರವಾನಿಸಿದ ಎಚ್‌ ಡಿಕೆ ; ಷರತ್ತು ಒಪ್ಪಿದ್ರೆ ಮೈತ್ರಿಗೆ ಸಿದ್ಧ ರಾಷ್ಟೀಯ ಪಕ್ಷಗಳಿಗೆ ಚೆಂಡು ಎಸೆದ ಕುಮಾರಸ್ವಾಮಿ

ಬೆಂಗಳೂರು:ಈ ಬಾರಿ ಅತಂತ್ರ ಫಲಿತಾಂಶ ಸಾಧ್ಯತೆಯೂ ಇರುವುದರಿಂದ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ನಮ್ಮ ಷರತ್ತುಗಳಿಗೆ ಒಪ್ಪಿದರೆ ಮೈತ್ರಿಗೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಕುಮಾರಸ್ವಾಮಿ, ನಮಗೆ 50 ಸೀಟ್ ಗೆಲ್ಲುವ ವಿಶ್ವಾಸವಿದೆ. ಈ ಬಾರಿ ನಮ್ಮ ಷರತ್ತು ಈಡೇರಿಸುವ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರಗಳಡಿ ಎರಡು ಬಾರಿ ಮುಖ್ಯಮಂತ್ರಿಯಾದಾಗ ಕುಮಾರಸ್ವಾಮಿ ಇಕ್ಕಟ್ಟಿನ ಸ್ಥಿತಿ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಸ್ಪಷ್ಟ ನಿಲುವು ಹೊಂದಿದ್ದು, ಕೆಲ ಷರತ್ತು ಪೂರೈಸಿದರೆ ಮಾತ್ರ ಮೈತ್ರಿಗೆ ರೆಡಿ ಎಂದಿದ್ದಾರೆ.

ಸರ್ಕಾರ ನಡೆಸಲು ಸ್ವತಂತ್ರ ನೀಡಬೇಕು. ಯಾರ ಅಪ್ಪಣೆ ತೆಗೆದುಕೊಳ್ಳುವಂತಿರಬಾರದು. ಜೆಡಿಎಸ್ ಶಾಸಕರಿಗೆ ಜಲಸಂಪನ್ಮೂಲ, ವಿದ್ಯುತ್, ಸಾರ್ವಜನಿಕ ಕೆಲಸಗಳ ಖಾತೆ ನೀಡಬೇಕು. ಜೆಡಿಎಸ್ ಪ್ರಣಾಳಿಕೆ ಅಂಶಗಳನ್ನು ಜಾರಿಗೆ ತರಲು ಅವಕಾಶ ಕೊಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ಮುಂದಿಡಲಿದ್ದಾರೆ ಎಂದು ತಿಳಿದುಬಂದಿದೆ.