This is the title of the web page
This is the title of the web page

ಕೊಪ್ಪಳ ವ್ಯಾಮಾಚಾರ: ಕಗರಿದ ಮುಗ್ಧತೆಯ ಬಾಣಂತಿಯ ಜೀವನ

ಕೊಪ್ಪಳ ವ್ಯಾಮಾಚಾರ: ಕಗರಿದ ಮುಗ್ಧತೆಯ ಬಾಣಂತಿಯ ಜೀವನ

 

ಕೊಪ್ಪಳ: ಸುಟ್ಟು ಕೊಲೆ ಮಾಡಿದ ಸ್ಥಿತಿಯಲ್ಲಿ ಬಾಣಂತಿಯ ಮೃತದೇಹ ಸಿಕ್ಕಿದ್ದು, ನಿಧಿ ಆಸೆಗಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಕೊಪ್ಪಳ ಜಿಲ್ಲೆಯ ಗಬ್ಬೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೇತ್ರಾವತಿ ಕುರಿ (26) ಅವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೇತ್ರಾವತಿ ಒಂದೂವರೆ ತಿಂಗಳ ಬಾಣಂತಿಯಾಗಿದ್ದು, ಅಮವಾಸ್ಯೆ ಹಿನ್ನಲೆಯಲ್ಲಿ ನಿಧಿಗಾಗಿ ಆಕೆಯನ್ನು ತಡರಾತ್ರಿ ಸುಟ್ಟು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಿಂದ ಅಣತಿ ದೂರದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಈಕೆಯ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.