This is the title of the web page
This is the title of the web page

ಗೋವಾ ಎಂಬ ಮಾಯಾನಗರಿಯೊಳಗೆ ಒಂದು ಸುತ್ತು ಪ್ರವಾಸಿಗರನ್ನು ಕೈ ಬಿಸಿ ಕರೆಯುವ ಕಲನಗೋಟ್ ಬೀಚ್

ಗೋವಾ ಎಂಬ ಮಾಯಾನಗರಿಯೊಳಗೆ ಒಂದು ಸುತ್ತು ಪ್ರವಾಸಿಗರನ್ನು ಕೈ ಬಿಸಿ ಕರೆಯುವ ಕಲನಗೋಟ್ ಬೀಚ್

ಬೆಳಗಾವಿ :  ಬೆಳಗಾಯಿಂದ ಮೊನ್ನೆ ತಾನೇ ಯೂಟ್ಯೂಟ್‌ನಲ್ಲಿ ಕಾವ್ ಕಾವ್ ಕರಿತೈತಿ ಗೋವಾ ಎಂಬ ಹಾಡು ಕೇಳಿದಾಗಿನಿಂದ ಈ ಸಾರಿಯಾದರೂ ಸಂಕ್ರಾಂತಿಗೆ ಗೋವಾ ಹೋಗಬೇಕು ಎಂದು ತಲೆಯಲ್ಲಿ ಓಡಾಡ ತೊಡಗಿತು. ಯಾವಾಗಲೂ ನಾವು ಸಂಕ್ರಾಂತಿಗೆ ಕೂಡಲಸಂಗಮಕ್ಕೆ ಹೋಗುವುದು ವಾಡಿಕೆಯಾಗಿ ಬಿಟ್ಟಿತು.

ಈ ಸಲ ಆ ವಾಡಿಕೆಯನ್ನು ಬಿಟ್ಟು ಬೇರೆ ಕಡೆ ಹೋಗಬೇಕು ಎಂದು ನಮ್ಮ  ಗೆಳೆಯರ ಜೊತೆ ಮಾತಾಡಿದೆ. ಗುರುವಾರ ಯಾವುದೇ ತೀರ್ಮಾನಕ್ಕೆ ಬರಲೂ ಸಾಧ್ಯವಾಗಲಿಲ್ಲ. ಶುಕ್ರವಾರ ಬೆಳಿಗ್ಗೆ ಮತ್ತೆ ಎಲ್ಲರೂ ಸೇರಿ ಏಲ್ಲಿಗೆ ಹೋಗಬೇಕು ಎಂದು ಕೇಳಿದರು. ಕೆಲವು ಜನರು ಮುರಡೇಶ್ವರ, ಗೋಕರ್ಣ, ಯಾಣ ಈ ಸ್ಥಳಗಳಿಗೆ ಹೋದರೆ ಸೂಕ್ತ ಎಂದು ತಿಳಿಸಿದರು. ಆದರೆ ಮತ್ತೆ ಕೆಲವರು ಆ ಕಡೆ ಬೇಡ ನಾವು ಈಗಾಗಲೇ ನೋಡಿದ್ದೇವೆ! ಆದ್ದರಿಂದ ಗೋವಾ ಕಡೆಗೆ ಹೋಗಬೇಕು ಎಂದರು.ಕೊನೆಗೆ ಏಲ್ಲಿಗೆ ಹೋಗಬೇಕು ಎಂದು ತೀರ್ಮಾನವಾಗದೇ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ಹೋದರು. ಶುಕ್ರವಾರ ಸಂಜೆ 7 ಗಂಟೆಗೆ ಮತ್ತೆ ಏಲ್ಲರೂ ಸೇರಿ, ಅದೇ ಹಾಡನ್ನು ಮತ್ತೇ ಹಾಡಲಾಯಿತು. ಹಂಗೋ ಹಿಂಗೋ ಎಂದುಕೊಂಡ ಕೊನೆಗೆ ಗೋವಾಕ್ಕೆ ಹೋಗಬೇಕೆಂದು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಬೆಳಗ್ಗೆ 8 ಗಂಟೆಗೆ ಏಲ್ಲರೂ ರೆಡಿಯಾಗಿ ಗಾಡಿ ಹತ್ತಿ ಕುಳಿತೆವು. ಹೊರಡುವಾಗ ಗೊತ್ತಾಯ್ತು  8 ಜನರ ಬದಲಾಗಿ 12 ಜನರು ಗಾಡಿಯೊಳಗೆ ಇದ್ದರು. ಅಂತೂ ಮನೆಯಲ್ಲಿ ಬೈಯಿಸಿಕೊಂಡು ಗಾಡಿ ಹತ್ತಿ ಹೊರಟಾಗ ಬೆಳಗ್ಗೆ 9 ಗಂಟೆಗೆ ಗೋವಾ ಕಡೆಗೆ ಪಯಣ ಹೊರಟಿತು. ಯಾವ ಕಡೆಗೆ ಹೋದರೆ ಸೂಕ್ತ ಎಂದು ಮಾತಾಡಿಕೊಳ್ಳಲು ಆರಂಭಿಸಿದೆವು.

ಅಲ್ಲಲ್ಲಿ ಚಹಾ, ಬಿಸ್ಕಿತ್ತು ತಿನ್ನುತ್ತಾ,  ತಲುಪಿದೆವು. ಮುಂದಿನ ದಾರಿಯಲ್ಲಿ ಗೋವಾಕ್ಕೆ ಸ್ವಾಗತ ಎನ್ಣ್ಗ ಕಾಣಿಸಿತು. ಅಷ್ಟರಲ್ಲಿ ಗೋವಾ ಪೊಲೀಸರು ನಮ್ಮ ಗಾಡಿಗೆ ಕೈ ಮಾಡಿ ನಿಲ್ಲಿಸಿದರು. , ಅವರೊಡನೆ  ಮಾತಾಡಿ ದಂಡ ಕಟ್ಟಿ ಗೋವಾಕ್ಕೆ ಪ್ರವೇಶ ಪಡೆದೆವು.ಗೋವಾ ಪ್ರವೇಶಿಸುತ್ತಿದ್ದಂತೆ ಯಾವ ಬೀಚ್‌ಗೆ ಹೋಗಬೇಕು ಎಂದು ಮತ್ತೆ ಏಲ್ಲರೂ ಅಂದುಕೊಳ್ಳ ತೊಡಗಿದರು.

ನಾನು ಗೂಗಲ್ ನಲ್ಲಿ ಕಣ್ಣಾಡಿಸಿದಾಗ ಕೆಲವು ಬೀಚ್‌ಗಳ ಸರಮಾಲೆಯೇ ಸಿಕ್ಕಿತು. ಅದರಲ್ಲಿ ಯಾವುದು ಉತ್ತಮ ಎಂದುಕೊಳ್ಳುತ್ತಿರುವಾಗಲೇ, ಎಲ್ಲರೂ ಜೋರಾಗಿ ಕಲನಗೋಟ ಬೀಚ್ ಎಂದು ಅರಚಿದರು. ಮಡಗಾಂವ್, ಹಳೆ ಗೋವಾ, ಪಣಜಿ ಮೂಲಕ ಸಾಗಿ ಕೊನೆಗೆ ಕಲನಗೋಟ್ ಬೀಚ್ ತಲುಪುವಷ್ಟರಲ್ಲಿ ನಮ್ಮ ಅವಸ್ಥೆ ಹೇಳದಂತಾಗಿತ್ತು. ಬೆಳಗ್ಗಿನ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಬೀಚ್ ಕಡೆಗೆ ನಡೆಯ ತೊಡಗಿದೆವು. ದಾರಿಯಲ್ಲಿ ನಮ್ಮ ಊರಿನ ಗೆಳೆಯರು ಕಂಡರು. ಅವರೊಡನೆ ಮಾತಾಡಿ, ನಾವು ಸಹ ಎಲ್ಲರಂತೆ “ಐ ಲವ್ ಗೋವಾ” ಎಂಬ ಟೀಶರ್ಟ್ ಖರಿದೀಸಿ ಬೀಚ್ ಕಡೆಗೆ ನಡೆದೆವು. ಬೆಳಗ್ಗಿನ ತಂಪಾದ ವಾತಾವರಣ ನಮಗೆ ಚಳಿಯ ಅನುಭವವನ್ನು ನೀಡತೊಡಗಿತು. ನೀರಿನಲ್ಲಿ ಇಳಿದಾಗ ಯಾವುದೇ ರೀತಿಯ ಚಳಿ ನಮಗೆ ಅನಿಸಲಿಲ್ಲ. ಬೆಳಗ್ಗಿನ 10 ಗಂಟೆಯಿAದ ಮಧ್ಯಾಹ್ನ 2 ರವರೆಗೆ ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆದಿದ್ದೆ ಗೊತ್ತಾಗಲಿಲ್ಲ. ಬೆಳಗ್ಗಿನಿಂದ ಏನು ತಿನ್ನದೇ ಇದ್ದಿದ್ದರಿಂದ ಹೊಟ್ಟೆಯಲ್ಲಿ ತಳಮಳ ಆಗುತ್ತಿತ್ತು. ನೀರಿನಿಂದ ಹೊರಬಂದು ಮತ್ತೆ ಸ್ನಾನ ಮಾಡಿ ಗಾಡಿಯಲ್ಲಿದ್ದ ತಿಂಡಿ ತಿನಿಸುಗಳನ್ನು ತಿಂದೆವು. ಭಾಗ ಬೀಚ್‌ನಿಂದ ಗಾಡಿ ಹೊರ ಬಂದು ಊಟ ಮಾಡಬೇಕು ಎಂದು ಪಣಜಿ ಹೆದ್ದಾರಿ ಹಿಡಿದು ಹೊರೆಟೆವು. ಅಲ್ಲಲ್ಲಿ ಗೋವಾದ ನಿಸರ್ಗ ಸೌಂದರ್ಯ ಕಣ್ಣಿಗೆ ಮುದ ನೀಡಿತು. ಕೊನೆಗೆ ಪೊಂಡಾದಲ್ಲಿ ಊಟಿ ಸವಿದು ಅಲ್ಲಿಂದ ಕರ್ನಾಟಕದ ಕಡೆಗೆ ಪ್ರಯಾಣ ಮುಂದುವರೆಸಿದೆವು. ಮತ್ತೆ ಹೊಟ್ಟೆ ಹಸಿದಾಗ ಚಹಾ ಬಿಸ್ಕಿಟ್ ತಿನ್ನಲು ಸಾಧ್ಯವಾಗದೇ  ಉಪಹಾರ ಸೇವಿಸಿ, ಮರಳಿ ಗೂಡು ಸೇರಿದಾಗ ರಾತ್ರಿ 10 ಗಂಟೆಯಾಯಿತು. ಒಟ್ಟಿನಲ್ಲಿ ಸಂಕ್ರಾಾಂತಿಯ ಗೋವಾಕ್ಕೆ ಹೋಗಿ ಬಂದದ್ದು, ಪೊಲೀಸರಿಗೆ ದಂಡ ಕಟ್ಟಿದ್ದು, ಬೀಚ್‌ನಲ್ಲಿ ಮೋಜು ಮಸ್ತಿ ಮಾಡಿದ್ದು, ಗೆಳೆಯರ ಹಾಸ್ಯ ಚಟಾಕಿಗಳು,  ಹಾಡುಗಳು ಇನ್ನೂ ಸಹ ಕಣ್ಣಿಗೆ ಕಟ್ಟಿದಂತೆ ತಲೆಯಲ್ಲಿ ಓಡಾಡುತ್ತಿವೆ.