ಚುನಾವಣೆ ಆಮಿಷ: ಬಿಜೆಪಿ ಬೆಂಬಲಿತರಿಂದ 7 ಲಕ್ಷ ರೂ. ಮೌಲ್ಯದ ವಸ್ತಗಳು ಪತ್ತೆ

ಚುನಾವಣೆ ಆಮಿಷ: ಬಿಜೆಪಿ ಬೆಂಬಲಿತರಿಂದ 7 ಲಕ್ಷ ರೂ. ಮೌಲ್ಯದ ವಸ್ತಗಳು ಪತ್ತೆ

ಬೆಳಗಾವಿ: ಚುನಾವಣೆಗಾಗಿ ಮತದಾರರಿಗೆ ಆಮಿಷಯೊಡ್ಡಲು ತಂದಿದ್ದ ಬಿಜೆಪಿ ಬೆಂಬಲಿತರಿಂದ 7 ಲಕ್ಷ ರೂ. ಮೌಲ್ಯದ ವಸ್ತು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ.

ಖಾನಾಪುರ ಮುಖ್ಯರಸ್ತೆಯ ಲೋಕಮಾನ್ಯ ಭವನದ ಮುಂದುಗಡೆ ನಿಂತಿದ್ದ ಗೂಡ್ಸ್ ವಾಹನದಲ್ಲಿ ಅಪಾರ ಪ್ರಮಾಣದ ವಸ್ತುಗಳನ್ನು ಪತ್ತೆಯಾಗಿದ್ದು, ವಾಹನ ಸಮೇತ ಗೋಡೆ ಗಡಿಯಾರಗಳು, ಮದ್ಯದ ಬಾಟಲಿಗಳು ವಶಕ್ಕೆ ಪಡೆಯಲಾಗಿದೆ.
ಬಿಜೆಪಿ ಮುಖಂಡ ಎ .ದಿಲೀಪ್ ಕುಮಾರ್ ಇವರ ಹೆಸರಿರುವ ಹಾಗೂ ಇವರ ಫೋಟೋ ಸಾಮಗ್ರಿಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಹಂಚಲು ತಂದಿದ್ದಾರೆ ಎನ್ನಲಾಗಿದೆ. ಮಿನಿ ಗೂಡ್ಸ್ ವಾಹನದಲ್ಲಿ ಸಂಗಪ್ಪ ಮಲ್ಲಿಕಾರ್ಜುನ್ ಕುಡಚಿ, ಬೆಂಡಿಗೆರೆ ಗ್ರಾಮ ಪಂಚಾಯತ್ ಮೆಂಬರ್ ಎಂಬುವರು ಬೆಳಗಾವಿ ನಗರದ ಬಾಕ್ಸೈಟ್ ರಸ್ತೆಯ ಬಸ್ ಸ್ಟ್ಯಾಂಡ್ ನಲ್ಲಿದ್ದ ವಸ್ತುಗಳನ್ನು ವಾಹನದಲ್ಲಿ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.