ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸೀಟ್ ಗೆಲ್ಲೋದು ಕಷ್ಟ.ಯಾಕಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ  : ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅಚ್ಚರಿ ಹೇಳಿಕೆ

ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸೀಟ್ ಗೆಲ್ಲೋದು ಕಷ್ಟ.ಯಾಕಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ  : ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅಚ್ಚರಿ ಹೇಳಿಕೆ

 

ಮೈಸೂರು,  29,ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಮಾದರಿ ರಾಜ್ಯದಲ್ಲಿ ಸರ್ಕಾರ ಇದ್ದಿದ್ರೆ ಹೆಚ್ಚು ಸೀಟ್ ಗೆಲ್ಲಬಹುದಿತ್ತು.ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಗೆಲ್ಲೋದು ಅರ್ಧ ಮಾತ್ರ. ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಗೆಲ್ಲೋದು ಕಷ್ಟ. ಯಾಕಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ.

ನಾಡಿನ ಹಿರಿಯ ಸಾಹಿತಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಒಲವು ಹೊಂದಿರುವ ಎಸ್.ಎಲ್.ಭೈರಪ್ಪ ಮೈಸೂರಿನಲ್ಲಿ ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದರ.

ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌  ಹಾಗೂ ಬಿಜೆಪಿ ಮುಖಂಡರು ಇಂದು ಕುವೆಂಪುನಗರದ ಎಸ್.ಎಲ್.ಬೈರಪ್ಪ ನಿವಾಸಕ್ಕೆ ಭೇಟಿಗಾಗಿ ತೆರಳಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬೈರಪ್ಪ ಹೇಳಿದಿಷ್ಟು..

ಕಾಂಗ್ರೆಸ್  ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಮರೆ ಮಾಚಲು ಕಾಂಗ್ರೆಸ್‌ , ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಜತೆಗೆ ಕೇಂದ್ರದಿಂದ ಬಂದ ಅನುದಾನವನ್ನು ಫ್ರೀ ಬೀಸ್ ಗೆ ಬಳಸಿಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಮಾದರಿ ರಾಜ್ಯದಲ್ಲಿ ಸರ್ಕಾರ ಇದ್ದಿದ್ರೆ ಹೆಚ್ಚು ಸೀಟ್ ಗೆಲ್ಲಬಹುದಿತ್ತು. ಮೋದಿ  ಅಲೆ ಕಡಿಮೆ ಆಗಿದೆಯೋ, ಇಲ್ವೋ ಗೊತ್ತಿಲ್ಲ .ಮೈಸೂರಿನಲ್ಲಿ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿಕೆ.