ಕಪ್ಪು ಹಣ ತರಲಿಲ್ಲ. 15 ಲಕ್ಷ ರೂಪಾಯಿ ಅಕೌಂಟ್ ಗೆ ಹಾಕಲಿಲ್ಲ.ಏನಾಯ್ತು ಮೋದಿಯವರೇ ಎಂದು ಸಿದ್ದರಾಮಯ್ಯ ಪ್ರಶ್ನೆ
ದಾವಣಗೆರೆ: ಪ್ರಧಾನ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳೋರು ಈ ದೇಶದಲ್ಲಿ ಯಾರು ಇಲ್ಲ. ಕಪ್ಪು ಹಣ ತರಲಿಲ್ಲ. 15 ಲಕ್ಷ ರೂಪಾಯಿ ಅಕೌಂಟ್ ಗೆ ಹಾಕಲಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಯ್ತಾ, ಉದ್ಯೋಗ ಕೊಡಲಿಲ್ಲ, 15 ಪೈಸೆನೂ ಹಾಕಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ನಾ ಕಾವುಂಗ ನಾ ಕಾನೇದೂಂಗ ಅಂತಾರೆ. ಆದರೆ ಇಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಲೂಟಿ ಹೊಡೆದಿದೆ. ಗುತ್ತಿಗೆದಾರ ಸಂಘದವರು ಶೇಕಡಾ 40ರಷ್ಟು ಕಮಿಷನ್ ಆರೋಪ ಮಾಡಿದ್ದರು. ಕಾನೇಂದೂಗ ಏನಾಯ್ತು ಮೋದಿಯವರೇ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಆಲಿಬಾಬಾ ಮತ್ತು ನಲವತ್ತು ಕಳ್ಳರ ರೀತಿ. ಎಲ್ಲದರಲ್ಲೂ ಲಂಚದ ಹಾವಳಿ ಜಾಸ್ತಿಯಾಗಿತ್ತು. ಇಂಥ ಕೆಟ್ಟ ಸರ್ಕಾರ ಯಾವಾಗಲೂ ಬಂದಿರಲಿಲ್ಲ. ನಮ್ಮ ಸರ್ಕಾರ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದೆ. ಇವರ ಮನೆ ಹಾಳಾಗಿ ಹೋಗಾ, ಒಂದೇ ಒಂದು ಮನೆನೂ ಕಟ್ಟಿಕೊಟ್ಟಿಲ್ಲ. ನಾವು ಅಧಿಕಾರಕ್ಕೆ ಬಂದರೆ 20 ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ಕೂಡಲೇ ಮಂಜೂರು ಮಾಡುತ್ತೇವೆ. ಸದನದಲ್ಲಿಯೇ ಯಡಿಯೂರಪ್ಪ ಅವರಿಗೆ ಲಂಚ ಕಡಿಮೆ ಮಾಡಿ ಎಂದು ಹೇಳಿದ್ದೆ. ಗ್ಯಾರಂಟಿ ಕಾರ್ಡ್ ಮಾಡೋಕೆ ಆಗಲ್ಲ ಅಂತ ಬೊಮ್ಮಾಯಿ ಹೇಳ್ತಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ನಾವು ನೂರಕ್ಕೆ ನೂರರಷ್ಟು ನುಡಿದಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು.