ಬೆಳಗಾವಿ: ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡಬೇಕೆಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಬೆಳಗಾವಿಯಲ್ಲಿ ಯುವ ಕ್ರಾಂತಿ ರ್ಯಾಲಿಗೆ ಚಾಲನೆ ನೀಡಿದ್ದಾರೆ. ಭವ್ಯ ಭಾರತ ಕನಸು ನನಸಾಗಬೇಕಾದರೆ ಯುವಕರ ಬಲಿಷ್ಠವಾಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ ಹೇಳಿದರು.
ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಯುವಕರಿಗೆ ಮತದಾನ ಹಕ್ಕು ನೀಡಿದೆ. ಇದರಿಂದ 18 ವರ್ಷದ ಯುವಕರು ಮತದಾನ ಮಾಡಲು ಅನುಕೂಲವಾಗಿದೆ. ಆದರೆ, ಅದೇ ಯುವಕರಿಗೆ ಮೋದಿ ಆಡಳಿತದಿಂದ ಕಂಟಕ ಎದುರಾಗಿದೆ. ಭಾರತ ಕಟ್ಟಬೇಕಾಗಿರುವ ಯುವಕರು ಉದ್ಯೋಗ ಇಲ್ಲದೇ ಮನೆಯಲ್ಲಿ ಕುಳಿತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.
140 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು:
ಖಾಸಗಿ ಕ್ಷೇತ್ರದಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಭಾರತದ ಭವಿಷ್ಯಕ್ಕಾಗಿ ಯುವಕರಿಗೆ ಉದ್ಯೋಗ ಸಿಗಬೇಕು. ಅದಕ್ಕಾಗಿ ರಾಹುಲ್ ಗಾಂಧಿಯವರು ಹೊಸ ಯೋಜನೆ ಘೋಷಣೆ ಮಾಡುವ ಮೂಲಕ ಯುವಕರಿಗೆ ಉತ್ಸಾಹ ತುಂಬುತ್ತಿದ್ದಾರೆ. 40 % ಕಮಿಷನ್ ದಿಂದ ಸರ್ಕಾರ ಮೇಲಿನ ಭರವಸೆಯನ್ನು ರಾಜ್ಯದ ಜನತೆ ಕಳೆದುಕೊಂಡಿದ್ದಾರೆ, ಆದರೂ ಬಿಜೆಪಿಗರು, ಬಿಜಿಪಿಯೇ ಭರವಸೆ ಎಂದು ಪ್ರಚಾರ ಮಾಡುತ್ತಿದ್ದಾರೆ, ಇನ್ಮೊಂದೆ ಇವರ ಆಟ ನಡೆಯುವುದಿಲ್ಲ ಎಂದು ಚಾಟಿ ಬೀಸಿದರು.
ರಾಜ್ಯದ 140 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಮಲ ಕೆಸರಿನಲ್ಲಿ ಇದ್ದರೆ ಚೆಂದ… ತೆನೆ ಹೋಲದಲ್ಲಿ ಇದ್ದರೆ ಚೆಂದ.. ಕೈ ಅಧಿಕಾರದಲ್ಲಿ ಇದ್ದರೆ ಚೆಂದ.. ಎನ್ನುವ ಮೂಲಕ ಕಮಲ ಪಡೆಗಳಿಗೆ ಡಿಕೆಶಿ ಕುಟುಕಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಜನ ವಿರೋಧಿ ಸರ್ಕಾರ ಕಿತ್ತೆಸೆದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿಕೊಂಡರು.
ಬಿಜೆಪಿಗರು ಹಿಂಬಾಗಿನಿಂದ ಬಂದು ಅನೈತಿಕ ಸರ್ಕಾರ ರಚನೆ ಮಾಡಿದ್ದಾರೆ. ನಿಮ್ಮ ಪಾಪ ಕೂಡಾ ತುಂಬಿ ತುಳುತ್ತಿದೆ. ಅದರ ಕಾಲ ಸನ್ನಿಹವಾಗಿದೆ. ಕೋವಿಡ್ ಕಾಲದಲ್ಲಿ ಜನರ ಸಂಕಷ್ಟಕ್ಕೆ ಮೀಡಿಯದ ಮೋದಿ ಸರ್ಕಾರ , ಚುನಾವಣೆ ಪ್ರಚಾರ ಪದೇಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಅಂದರೇ ಅದರ ಅರ್ಥ ಏನು ? ಬಿಜೆಪಿಗೆ ಅಧಿಕಾರ ಬೇಕು ಹೊರತು ಬೇರೇನು… ಎಂದು ಪ್ರಶ್ನಿಸಿದರು.
60 ಲಕ್ಷ ಸಣ್ಣ ಕೈಗಾರಿಕೆ ಮುಚ್ಚಿವೆ. ಎರಡು ಕೋಟಿ ಜನರು ಬಿದ್ದಿಗೆ ಬಂದಿದ್ದಾರೆ ಹೀಗಾಗಿ ರಾಜ್ಯದಲ್ಲಿ ಅನೇಕ ಜನರ ಜೀವನ ಹಾಳಾಗಿದೆ. ಇವರನ್ನು ಸರ್ಕಾರ ಕೈ ಹಿಡಿಯಬೇಕು. ಸಂಕಷ್ಟ ಬದುಕು ಸಾಗಿಸುವುದು ಹೇಗೆ. ಇದರಿಂದ 12 ಲಕ್ಷ ಜನರು ವಿದೇಶಕ್ಕೆ ಹೋಗಿದ್ದಾರೆ ಎಂದರು.
ಕಾಂಗ್ರೆಸ್ ಆಡಳಿ ಅವಧಿಯಲ್ಲಿ 1.62 ಲಕ್ಷ ಉದ್ಯೋಗ ಯುವಕರಿಗೆ ಉದ್ಯೋಗ ನೀಡಿದ್ದೆವೆ. ಉದ್ಯೋಗ ಕಡಿತ ಮಾಡಿರುವ ಬಿಜೆಪಿಯನ್ನು ತಿರಸ್ಕರಿಸಬೇಕಿದೆ. ಮಕ್ಕಳ ಶಿಕ್ಷಣ ವೇತನ, ಹೀಗೆ ಹಲವಾರು ಯೋಜನೆಗಳನ್ನು ಬೋಮ್ಮಾಯಿ ಸರ್ಕಾರ ಬಂದ್ ಮಾಡಿದೆ. ಬಳಿಕ ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ತಂದು ಯುವಕರ ಭವಿಷ್ಯ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.