This is the title of the web page
This is the title of the web page

ಜಗತ್ತಿನಲ್ಲಿ ಇಂಥ ವಿಶಿಷ್ಟವಾದ ಯೋಜನೆ ನನ್ನ ಇಲಾಖೆಯಿಂದ ಜಾರಿಗೊಳ್ಳುತ್ತಿರುವುದರಿಂದ ನನಗೆ ಖುಷಿ ತಂದಿದೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಜಗತ್ತಿನಲ್ಲಿ ಇಂಥ ವಿಶಿಷ್ಟವಾದ ಯೋಜನೆ ನನ್ನ ಇಲಾಖೆಯಿಂದ ಜಾರಿಗೊಳ್ಳುತ್ತಿರುವುದರಿಂದ ನನಗೆ ಖುಷಿ ತಂದಿದೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

 

ಮೈಸೂರು,ಆಗಸ್ಟ್,30 ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಹಿಳಾ ಕಾರ್ಯಕರ್ತರ ಪಡೆ ಪಿಂಕ್ ಧಿರಿಸಿನಲ್ಲಿತ್ತು. ವೇದಿಕೆಯಲ್ಲಿದ್ದ ಕುರ್ಚಿಗಳಿಗೆ ಪಿಂಕ್ ಹೊದಿಕೆ, ಐಡಿ ಕಾರ್ಡ್, ಟ್ಯಾಗ್ ಗಳು, ನೀರಿನ ಬಾಟಲ್ ಕೂಡ ಪಿಂಕ್ ಬಣ್ಣದ್ದಾಗಿದ್ದವು.ಮಹಿಳಾ ಕಾರ್ಯಕರ್ತೆಯರು ಪಿಂಕ್ ಬಣ್ಣದ ರಾಕಿಯನ್ನು ರಾಹುಲ್ ಗಾಂಧಿ ಅವರಿಗೆ ಕಟ್ಟುವ ಮೂಲಕ ರಕ್ಷಾಬಂಧನ ಸಂಭ್ರಮಿಸಿದರು.

ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದರು. ಈ ಮಧ್ಯೆ ಮಹಿಳಾ ಕಾರ್ಯಕರ್ತೆಯರು ಪಿಂಕ್ ಬಣ್ಣದ ರಾಕಿಯನ್ನು ರಾಹುಲ್ ಗಾಂಧಿ ಅವರಿಗೆ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿ ಸಂಭ್ರಮಿಸಿದರು.
ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಸಮಾವೇಶಕ್ಕೆ ಇಡಿ ವೇದಿಕೆ ಪಿಂಕ್ ಬಣ್ಣದಲ್ಲಿ ಕಂಗೊಳಿಸುತ್ತಿತ್ತು. ವೇದಿಕೆಯುದ್ದಕ್ಕೂ ಮೇಲ್ಬಾಗದಲ್ಲಿ ತ್ರಿವರ್ಣ ಮತ್ತು ಪಿಂಕ್ ಕಾಂಬಿನೇಷನಲ್ಲಿ ಅಲಂಕರಿಸಲಾಗಿತ್ತು.

ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ , ರಾಕಿ ಕಟ್ಟಿಸಿಕೊಂಡಿದ್ದನ್ನು ಪ್ರಸ್ತಾಪಿಸಿದರು. “ನಾನೊಬ್ಬ ಸಹೋದರನಾಗಿ ನಿಮಗೆ ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ. ನಮ್ಮ ಸರ್ಕಾರ ಹೇಗಿದ್ದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.