This is the title of the web page
This is the title of the web page

ಕೌಟುಂಬಿಕ ಕಲಹ: ಪತ್ನಿಯನ್ನು ಕೊಲೆಗೈದು ವಿಷಸೇವಿಸಿದ ಪತಿ

ಕೌಟುಂಬಿಕ ಕಲಹ: ಪತ್ನಿಯನ್ನು ಕೊಲೆಗೈದು ವಿಷಸೇವಿಸಿದ ಪತಿ

 

ಬೆಳಗಾವಿ : ಕೌಟುಂಬಿಕ ಕಲಹವೇ ಪತ್ನಿಯನ್ನು ಕೊಚ್ಚಿ ಕೊಂದ ಪತಿಯೊಬ್ಬ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಜಾನವ್ವ ದ್ಯಾಮನ್ನವರ (50) ಮೃತ ಮಹಿಳೆ, ಜಾನವ್ವರನ್ನ ಪತಿ ಬಸವಗೌಡ ಶಾಸಪ್ಪನವರ (55) ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಕಟಕೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವಗೌಡ, ಜಾನವ್ವ ಮೃತದೇಹ ರಾಮದುರ್ಗ ತಾಲೂಕಾಸ್ಪತ್ರೆಗೆ ರವಾನಿಸಲಾಗಿದ್ದು, ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.