This is the title of the web page
This is the title of the web page

ಆಕಾಶ್ ನಿಂದ ಹಂಟ್ ANTHE 2024 ಪರೀಕ್ಷೆ ಘೋಷಣೆ

ಆಕಾಶ್ ನಿಂದ ಹಂಟ್ ANTHE 2024 ಪರೀಕ್ಷೆ ಘೋಷಣೆ

ಬೆಳಗಾವಿ : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ವಿದ್ಯಾರ್ಥಿವೇತನ ಪರೀಕ್ಷೆ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ (ANTHE) ಆರಂಭಿಸಿ 15 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಇತ್ತೀಚಿನ ಆವೃತ್ತಿಯಾದ ANTHE -2024 ಪ್ರಕಟಿಸಿದೆ.
7 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಶೇ.100 ರವರೆಗೆ ವಿದ್ಯಾರ್ಥಿವೇತನ ಗಳಿಸಬಹುದಾಗಿದೆ. ನಗದು ಬಹುಮಾನ ಗೆಲ್ಲಬಹುದು. ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ಜೀವನದ ಕನಸನ್ನು ಸಾಕಾರಪಡಿಸಿಕೊಳ್ಳಬಹುದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಯುಎಸ್ಎ ದ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್ ಗೆ ಸಂಪೂರ್ಣ ಉಚಿತವಾಗಿ ಕರೆದೊಯ್ಯುವ 5 ದಿನಗಳ ಪ್ರವಾಸ ಕಾರ್ಯಕ್ರಮವೂ ಇರಲಿದೆ.

ANTHE ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಆಕಾಶ್ ಸಂಸ್ಥೆ ನೀಡುವ ಅತ್ಯುನ್ನತ ಕೋಚಿಂಗ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸೌಲಭ್ಯ ಪಡೆಯಲಿದ್ದಾರೆ. ಈ ಮೂಲಕ ಎನ್ಇಇಟಿ, ಜೆಇಇ, ರಾಜ್ಯ ಮಟ್ಟದ ಸಿಇಟಿಗಳು ಮತ್ತು ಎನ್ ಟಿಎಸ್ಇ ಮತ್ತು ಒಲಿಂಪಿಯಾಡ್ ನಂತಹ ವಿದ್ಯಾರ್ಥಿವೇತನಕ್ಕೆ ನಡೆಸಲಾಗುವ ಪರೀಕ್ಷೆಗಳಿಗೆ ಸಿದ್ಧರಾಗಲು ಈ ಕೋಚಿಂಗ್ ಕಾರ್ಯಕ್ರಮಗಳು ನೆರವಾಗಲಿವೆ.

ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ ನ ಸಿಇಒ ಮತ್ತು ಎಂಡಿ ದೀಪಕ್ ಮೆಹ್ರೋತ್ರಾ ಮಾತನಾಡಿ, ವಿದ್ಯಾರ್ಥಿಗಳ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳ ನಡುವಿನ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ AESL ಕಳೆದ 15 ವರ್ಷಗಳಿಂದಲೂ ನಿರ್ಣಾಯಕ ಪಾತ ವಹಿಸುತ್ತಾ ಬಂದಿದೆ. ANTHE 2024 ರೊಂದಿಗೆ ಭವಿಷ್ಯದ ವೈದ್ಯರು ಮತ್ತು ಎಂಜಿನಿಯರ್‌ ಗಳನ್ನು ಪೋಷಿಸಲು ನಾವು ಪ್ರತಿಭೆಗಳ ಹುಡುಕಾಟ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ಯಶಸ್ವಿಯಾದ ವಿದ್ಯಾರ್ಥಿಗಳು: ರಿಷಿ ಶೇಖರ್ ಶುಕ್ಲಾ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 25), ಕೃಷ್ಣ ಸಾಯಿ ಶಿಶಿರ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 67), ಅಭಿಷೇಕ್ ಜೈನ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 78). ಇವರಲ್ಲದೇ, ಎನ್ಇಇಟಿ 2023 ರಲ್ಲಿ ಸಂಸ್ಥೆಯ ಟಾಪ್ ಸ್ಕೋರರ್ ಗಳಾಗಿ ಕೌಸ್ತವ್ ಬೌರಿ (ಎಐಆರ್ 03), ಧೃವ್ ಅಡ್ವಾಣಿ(ಎಐಆರ್ 05), ಸೂರ್ಯ ಸಿದ್ಧಾರ್ಥ್ ಎನ್ (ಎಐಆರ್ 06), ಆದಿತ್ಯಾ ನೀರಜೆ (ಎಐಆರ್ 07) ಮತ್ತು ಆಕಾಶ್ ಗುಪ್ತಾ(ಎಐಆರ್ 28) ಹೊರಹೊಮ್ಮಿದ್ದಾರೆ.
ANTHE 2024 ಅ. 19 ರಿಂದ 27 ರ ಅವಧಿಯಲ್ಲಿ ನಡೆಯಲಿದ್ದು, ಆನ್ ಲೈನ್ ಮತ್ತು ಆಫ್ ಲೈನ್ ಗಳೆರಡರಲ್ಲೂ ನಡೆಯಲಿದೆ. ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರವೇಶ ಪರೀಕ್ಷೆ ಆಯೋಜಿಸಲಾಗುತ್ತಿದೆ. ಟಾಪ್ ಸ್ಕೋರರ್ ಗೆ ಶೇ.100 ರಷ್ಟು ವಿದ್ಯಾರ್ಥಿ ವೇತನದ ಜೊತೆಗೆ ನಗದು ಬಹುಮಾನ ನೀಡಲಾಗುತ್ತಿದೆ. ANTHE ಯ ಆಫ್ ಲೈನ್ ಪರೀಕ್ಷೆಗಳು ಅ. 20 ಮತ್ತು 27, 2024 ರಂದು ದೇಶಾದ್ಯಂತ ಆಕಾಶ್ ಸಂಸ್ಥೆಯ 315+ ಕೇಂದ್ರಗಳಲ್ಲಿ ನಡೆಯಲಿವೆ.
ಆನ್ ಲೈನ್ ಪರೀಕ್ಷೆಗಳನ್ನು ಅ.19 ರಿಂದ 27, 2024 ರವರೆಗೆ ಎಕ್ಸಾಂ ವಿಂಡೋದಲ್ಲಿ ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದೆ.
ANTHE 2024 ರ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಆನ್ ಲೈನ್ ಪರೀಕ್ಷೆಗಿಂತ ಮೂರು ದಿನಗಳ ಮೊದಲು ಮತ್ತು ಆಫ್ ಲೈನ್ ಪರೀಕ್ಷೆ ಆರಂಭಗೊಳ್ಳುವ ಏಳು ದಿನಗಳೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಆಫ್ ಲೈನ್ ಮತ್ತು ಆನ್ ಲೈನ್ ಪರೀಕ್ಷೆಗಳೆರಡಕ್ಕೂ 200 ರೂಪಾಯಿ ಶುಲ್ಕ ಇರಲಿದೆ.ಫಲಿತಾಂಶವನ್ನು 10 ನೇ ತರಗತಿ ವಿದ್ಯಾರ್ಥಿಗಳಿಗೆ ನ.08, 2024 ರಂದು ಪ್ರಕಟಿಸಲಾಗುತ್ತದೆ. ಇದೇ ವೇಳೆ, 7 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ನ. 13, 2024 ಮತ್ತು 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ನ.16, 2024 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಎಲ್ಲಾ ಫಲಿತಾಂಶಗಳು ANTHEವೆಬ್ ಸೈಟ್ anthe.aakash.ac.in ನಲ್ಲಿಯೂ ಲಭ್ಯವಿರಲಿದೆ.
ಈ ವೇಳೆ ಬ್ರಾಂಚ್‌ ಹೆಡ್‌ ಆಸೀಫ್‌ ಅಂಗಡಿ, ವರುಣ್‌ ಸೋನಿ, ವಿಜಯಕುಮಾರ್‌ ಚಿಮಕೃತಿ, ಸೋಹನ್‌ ಕುಮಾರ್‌ ಸೇರಿದಂತೆ ಇತರರ ಇದ್ದರು