ಮೈಸೂರು:‘ ಬರ ಪರಿಹಾರ ಸಂಬಂಧ ಈ ಎಲ್ಲಾ ವಿವರಗಳನ್ನ ಸುಪ್ರೀಂ ಕೋರ್ಟಿಗೆ ಕೊಟ್ಟಿದ್ದೇವೆ. NDRF ಶಿಫಾರಸ್ಸು ಮಾಡಿದೆ.ಬರ ಪರಿಹಾರ ಹಣ ಕೊಡಲೆ ಬೇಕು. ಇದು ಕೇಂದ್ರ ಸರ್ಕಾರದ ಹಣ ಅಲ್ಲ,ರಾಜ್ಯದ ಹಣ. 5 ವರ್ಷಕ್ಕೆ ಎನ್.ಡಿ.ಆರ್‌ಎಫ್ ನಲ್ಲಿ ಹಣ ಮೀಸಲಿಟ್ಟಿರುತ್ತಾರೆ. ಖರ್ಚು ವೆಚ್ಚದ ಬಗ್ಗೆ ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ ಎಂದರು.
ಕೇಂದ್ರ ಬರ ಪರಿಹಾರ ವಿಚಾರಕ್ಕೆ ಸಂಬಂಧಿಸಿ ಡಿಸೆಂಬರ್ ತಿಂಗಳಿನಿಂದಲೆ ಹಲವು ವರದಿ ಕೊಟ್ಟಿದ್ದೇವೆ.ಸುಳ್ಳಾದರೆ ನಾನು ರಾಜೀನಾಮೆ ಕೊಡುತ್ತೇನೆ. ಅವರು ಹೇಳಿದ್ದು ಸುಳ್ಳಾದರೆ ಅವರು ರಾಜೀನಾಮೆ ಕೊಡುತ್ತಾರಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಅಮಿತ್ ಶಾ ಅವರಿಗೆ ಸವಾಲು ಹಾಕಿದ ಸಿದ್ದರಾಮಯ್ಯ,’ 6 ತಿಂಗಳಿಂದ ವರದಿ ಕೊಡುತ್ತಲೆ ಬಂದಿದ್ದೇವೆ. ಡಿಸೆಂಬರ್ 23 ರಂದು ಸಭೆ ಕರೆದು ತೀರ್ಮಾನ ಮಾಡುತ್ತೇವೆ ಅಂದಿದ್ದರು. ಕೇಂದ್ರ ಅಧ್ಯಯನ ಸಮಿತಿ ವರದಿ ಕೊಟ್ಟಿತ್ತು.ಇದನ್ನೆಲ್ಲ ನಾನು ಸಾಬೀತು ಮಾಡುವೆ.ಒಬ್ಬ ಕೇಂದ್ರ ಗೃಹ ಸಚಿವರಾಗಿ ಅದು ಹೇಗೆ ಸುಳ್ಳು ಹೇಳುತ್ತಾರೆ. ಸತ್ಯದ ತಲೆಗೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಕಿಡಿ ಕಾರಿದರು. ಇಂತವರಿಗೆ ಮತ ಹಾಕಬಾರದು, ಜನರು ಬುದ್ದಿ ಕಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.