ಹಿಂಡಲಗಾ ಆರೋಪಿ ನ್ಯಾಯಾಲಯದಿಂದ ಪರಾರಿ; ಬಲೆ ಬೀಸಿದ ಖಾಕಿ ಪಡೆ

ಹಿಂಡಲಗಾ ಆರೋಪಿ ನ್ಯಾಯಾಲಯದಿಂದ ಪರಾರಿ; ಬಲೆ ಬೀಸಿದ ಖಾಕಿ ಪಡೆ

 

ಬೆಳಗಾವಿ: ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತರಲಾಗಿದ್ದ ಕಿಡಿಗೇಡಿ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಗುರುವಾರ (ಮದ್ಯಾಹ್ನ) ಕೋರ್ಟ್‌ ಆವರಣದಲ್ಲಿ ನಡೆದಿದೆ.

ಅಬ್ದುಲ್ ಗನಿ ಶಬ್ಬೀರ್ ಶೇಕ್ ಪರಾರಿಯಾದ ಆರೋಪಿ. ಬೆಳಗಾವಿಯ ಹಲವು ಪೊಲೀಸ್ ಠಾಣಾಯಲ್ಲಿ ಇತನ ವಿರುದ್ಧ ಕೇಸ್‌ ದಾಖಲಿವೆ. ನ್ಯಾಯಾಲಯದಲ್ಲಿ ಇಂದು ಆರೋಪಿ ವಿಚಾರಣೆ ಇರೊಂದರಿಂದ ಬೆಳಗಾವಿ ಹಿಂಡಲಗಾನಲ್ಲಿದ್ದ ಅಬ್ದುಲ್ ಗನಿಯನ್ನುಬೆಳಗಾವಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಪೊಲೀಸ್‌ ರು ಕರೆತಂದ್ದಿದರು. ಪೋಲಿಸರ ಸಮ್ಮುಖದಲ್ಲಿಯೇ ಆರೋಪಿ ಅವರ ಕಣ್ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಗನಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.