This is the title of the web page
This is the title of the web page

ರಾಜ್ಯದಲ್ಲಿ ಕಮಲ ಅರಳಿದ್ದೇ ಲಿಂಗಾಯತರಿಂದ , ಪ್ರಬಲ ಲಿಂಗಾಯತ ಮೂಲೆಗುಂಪು ಮಾಡಲು ನಡೆದಿದ್ದಿಯಾ ಮೆಗಾ ಪ್ಲ್ಯಾನ್..?

ರಾಜ್ಯದಲ್ಲಿ ಕಮಲ ಅರಳಿದ್ದೇ ಲಿಂಗಾಯತರಿಂದ , ಪ್ರಬಲ ಲಿಂಗಾಯತ ಮೂಲೆಗುಂಪು ಮಾಡಲು ನಡೆದಿದ್ದಿಯಾ ಮೆಗಾ ಪ್ಲ್ಯಾನ್..?

 

ಓದುಗರ ಆತ್ಮೀಯರಿಗಾಗಿ ಸುವರ್ಣ ಲೋಕ ದಿನಪತ್ರಿಕೆ ರಾಜ್ಯರಾಜಕೀಯ ವಿಶ್ಲೇಷಣೆಗೆ ಸದಾ ಮುಂದು

ಲಿಂಗಾಯತ ಮತಗಳಲ್ಲಿ ಅಲ್ಪ ಪ್ರಮಾಣದ ಇಳಿಕೆಯಾದರೂ ಬಿಜೆಪಿಗೆ ಈ ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಕಮಲ ಅರಳಿದ್ದೇ ಲಿಂಗಾಯತರಿಂದ , ಪ್ರಬಲ ಲಿಂಗಾಯತ ಮೂಲೆಗುಂಪು ಮಾಡಲು ನಡೆದಿದ್ದಿಯಾ ಮೆಗಾ ಪ್ಲ್ಯಾನ್..?

ಕಮಲ ಪಕ್ಷ ಹಿರಿಯ ಲಿಂಗಾಯತ ನಾಯಕರನ್ನು ಮೂಲೆಗೆ ಸರಿಸುತ್ತಿರುವ ಹಿನ್ನಲೆ ಏನು ?

ಲಿಂಗಾಯತರೇ ಅಂತಿಮ ನಿರ್ಣಾಯಕರು ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ, ಲಿಂಗಾಯತ ಮತಗಳ ಮೇಲಿ ನಿರ್ಣಾಯಕ.

ಬೆಂಗಳೂರು : ರಾಜ್ಯದಲ್ಲಿ ದಕ್ಷಿಣದಿಂದ ಉತ್ತರದವರೆಗೂ ಕಮಲ ಪಕ್ಷ ಕಟ್ಟಿ ಬೆಳೆಸಿದ ಲಿಂಗಾಯತರ ನಾಯಕರನ್ನು ಬಿಜೆಪಿ ಕುತಂತ್ರಿಗಳ ಆಟಕ್ಕೆ ಒಂದೊದಾಂಗಿ ಉರುತ್ತಿದ್ದು, ಸಂತೋಷ್ ‘ ದಾಳಕ್ಕೆ ಕಮಲ ದಳದಲ್ಲಿ ತಲ್ಲಣ ಸೃಷ್ಟಿಯಾಗುತ್ತಿದೆ.

ಕರ್ನಾಟಕದಲ್ಲಿ ಈಗ ಚುನಾವಣಾ ಪರ್ವ. ಅಂತೆಯೇ ಪಕ್ಷದಲ್ಲಿ ಹೊಸತನ, ಹೊಸ ತಲೆಮಾರಿನ ನಾಯಕರುಗಾಗಿ ಬಿಜೆಪಿ ತಲಾಷ್ ನಡೆಸಿದೆಯೇ ಎಂಬ ಗುಮಾನಿ ಜನರಲ್ಲಿ ದಟ್ಟವಾಗುತ್ತಿದೆ. ಈ ರೀತಿಯ ಅನುಮಾನಕ್ಕೆ ಎಡೆ ಮಾಡಿಕೊಟ್ಟದ್ದು, ಕಮಲದ ಹೈ ಕಮಾಂಡ್ ಇದ್ದಕ್ಕಿದ್ದಂತೆ ಹಿರಿಯ ತಲೆಗಳನ್ನು ಪಕ್ಕಕ್ಕೆ ಸರಿಸಲು ಆರಂಭಿಸಿದೆ.

2018 ರ ವಿಧಾನಸಭೆ ಚುನಾವಣೆಯಲ್ಲಿ, ಪಕ್ಷದ ಮೇರುನಾಯಕ ಹಾಗೂ ಪ್ರಭಾವಿ ಲಿಂಗಾಯತ ಮುಖಂಡ ಯಡಿಯೂರಪ್ಪ ನವರಿಗೆ ಎಪ್ಪತ್ತೈದು ವರ್ಷವಾಗಿದ್ದರು, ಪಕ್ಷ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯ ಮಂತ್ರಿ ಎಂದು ಘೋಷಿಸಿತು. ಆದಾಗಿಯೂ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಬಿಜೆಪಿಯ ವಜುಭಾಯಿ ವಾಲ ರಾಜ್ಯಪಾಲರಾಗಿದ್ದ ಕಾರಣ, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾರಣ, ಆ ಪಕ್ಷವನ್ನು ಸರ್ಕಾರ ರಚನೆಗೆ, ಬಹುಮತವಿಲ್ಲದಿದ್ದರೂ ಅಹ್ವಾನಿಸಿದರು. ಪಕ್ಷಾಂತರ ಪರ್ವ ಕೈಗೊಂಡು ಕಾಂಗ್ರೆಸ್ ಜೆಡಿಎಸ್ ನ ಶಾಸಕರನ್ನು ಸೆಳೆದು ಅಧಿಕಾರದ ಗದ್ದುಗೆ ಏರಿದ್ದು, ಎರಡು ವರ್ಷಗಳ ನಂತರ ವಯಸ್ಸಿನ ನೆಪವೊಡ್ಡಿ ಅವರನ್ನು ಹೀನಾಯವಾಗಿ ಪದಚ್ಯುತಿಗೊಳಿದ್ದು ಇತಿಹಾಸ.

ಲಿಂಗಾಯತರೇ ಅಂತಿಮ ನಿರ್ಣಾಯಕರು ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ, ಲಿಂಗಾಯತ ಮತಗಳ ಮೇಲಿ ನಿರ್ಣಾಯಕವಾಗಿದೆ. ಇಗಿನ ಬಿಜೆಪಿ ಬಿರುಸಿನ ಗಾಳಿಗೆ ಲಿಂಗಾಯತ ಪ್ರಬಲ ನಾಯಕರು ಸ್ಥಿತಿಯೇ ಬುಡಮೇಲಾಗುತ್ತಿದೆ. ಇದಕ್ಕೆ ಕಾರಣ ಯಾರು.

ಸಂತೋಷ್ ಮಾಡಿದ್ದು ತಪ್ಪು, ಮಹೇಶ್ ಟೆಂಗಿನಕಾಯಿ (ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ) ಸಂತೋಷ್ ಅವರ ಅನುಯಾಯಿ, ಹೀಗಾಗಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಟೆಂಗಿನಕಾಯಿ ಅವರೇ ಟಿಕೆಟ್ ಬಗ್ಗೆ ಸ್ವತಃ ಉತ್ಸುಕರಾಗಿರಲಿಲ್ಲ. ಆದರೆ ಸಂತೋಷ್, ಶೆಟ್ಟರ್ ಅವರನ್ನು ಹೊರಹಾಕಲು ಬಯಸಿದ್ದರು ಎಂಬುದು ಸ್ಪಷ್ಟವಾಗಿದೆ. ಶೆಟ್ಟರ್ ಅವರದ್ದು ರಾಜಕೀಯದಲ್ಲಿ 40 ವರ್ಷಗಳ ತಪಸ್ಸು, ಅವರು ಪಕ್ಕಾ ಜನಸಂಘ-ಆರ್‌ಎಸ್‌ಎಸ್ ಕುಟುಂಬದಿಂದ ಬಂದವರಾಗಿದ್ದರು. ಶೆಟ್ಟರ್ ಅವರ ತಂದೆ ಮೇಯರ್ ಆಗಿದ್ದರು ಮತ್ತು ಅವರ ಚಿಕ್ಕಪ್ಪ ಕೂಡ ರಾಜಕೀಯದಲ್ಲಿದ್ದರು.

ಶೆಟ್ಟರ್ ಅವರ ಮೇಲೆ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೃಪಾಕಟಾಕ್ಷವಿತ್ತು, ಆದರೆ ಬಿಎಲ್ ಸಂತೋಷ್ ಕಾರಣದಿಂದ ಅವರಿಗೆ ಸಚಿವ ಸಂಪುಟದಲ್ಲು ಅವಕಾಶ ನೀಡಿರಲಿಲ್ಲ, ಸಂತೋಷ್ ಅವರು ವಿಧಿಸಿದ ಕಠಿಣ ನಿರ್ಬಂಧಗಳು ಬೊಮ್ಮಾಯಿ ಮತ್ತು ಬಿಎಸ್ ವೈ ಕೈ ಕಟ್ಟಿಹಾಕಿತ್ತು, ಪರಿಸ್ಥಿತಿಯ ಕೈ ಗೆ ಸಿಲುಕಿ ಅವರು ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.

ಲಿಂಗಾಯತ ಮತಗಳಲ್ಲಿ ಅಲ್ಪ ಪ್ರಮಾಣದ ಇಳಿಕೆಯಾದರೂ ಬಿಜೆಪಿಗೆ ಈ ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 17-20% ಮತಗಳನ್ನು ಹೊಂದಿರುವ ಲಿಂಗಾಯತರು ಸುಮಾರು 150 ಕ್ಷೇತ್ರಗಳಲ್ಲಿ ಪ್ರಬಲರಾಗಿದ್ದಾರೆ.

ಆದರೆ ಬೊಮ್ಮಾಯಿಯವರು ಬಿಜೆಪಿ ವರಿಷ್ಠರನ್ನು ಭ್ರಮ ನಿರಸನಗೊಳಿಸಿದರು. ಭ್ರಷ್ಟಾಚಾರದ ಆರೋಪಗಳ ಸುರಿಮಳೆಯ ಜೊತೆಗೆ, ಆಡಳಿತದಲ್ಲಿ ಹೊಸತನ ಚುರುಕುತನ ತರಲು ಬೊಮ್ಮಾಯಿಯವರಿಗೆ ಸಾಧ್ಯವಾಗಲಿಲ್ಲ. ಹಿರಿಯರ ಅಸಹಕಾರವೂ ಇದಕ್ಕೆ ಕಾರಣ. ಬೊಮ್ಮಾಯಿಯವರನ್ನು ಬದಲಿಸಿದರೆ, 2008 ರಲ್ಲಿ ಜರುಗಿದ ಮೂರು ಮುಖ್ಯಮಂತ್ರಿ ಪ್ರಹಸನ ಮರುಕಳಿಸಿ ಪಕ್ಷದ ಘನತೆಗೆ ಧಕ್ಕೆಯಾಗಬಹುದು ಎಂದು ಕಮಲ ಹೈಕಮಾಂಢ್ ಸುಮ್ಮನಾಯಿತು. ಚುನಾವಣೆಯಲ್ಲಿ ಬೊಮ್ಮಾಯಿ ನಾಯಕತ್ವ ಜನತೆಗೆ ಅಪಥ್ಯವಾದೀತು ಎಂದರಿತ ಪಕ್ಷ ಹಳೇ ಗಂಡನ ಪಾದವೇ ಗತಿ ಎಂಬುದನ್ನು ಅರಿತು, ಯಡಿಯೂರಪ್ಪ ನವರೆಗೇ ಮಣೆ ಹಾಕಿತು.

ಇದರ ಭಾಗವಾಗಿ ವಯಸ್ಸಾದ ಹಿರಿಯ ತಲೆಗಳನ್ನು ಪಕ್ಕಕ್ಕೆ ಸರಿಸುವ ಕೆಲಸ ಸದ್ದಿಲ್ಲದೆ ನಡೆದಿದೆ. ಮೊದಲಿಗೆ ಯಡಿಯೂರಪ್ಪ, ನಂತರ ಈಶ್ವರಪ್ಪ, ಜಗದೀಶ್ ಶೆಟ್ಟರ್, ಹೀಗೆ. ಗೋವಿಂದ ಕಾರಜೋಳ ರನ್ನು ಮೂಲೆಗುಂಪು ಮಾಡುವ ಸಂದರ್ಭವಿತ್ತು. ದಲಿತ ಎಂಬ ಕಾರಣಕ್ಕೆ ಅವರಿಗೆ ಮತ್ತೆ ಟಿಕೆಟ್ ನೀಡಬೇಕು. ಮುಖ್ಯ ಮಂತ್ರಿ ರೇಸ್ ನಲ್ಲಿರಬಹುದಾದ ನಾಯಕರೆಂದರೆ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷಣ ಸವದಿ, ಗೋವಿಂದ ಕಾರಜೋಳ., ಆರ್ ಆಶೋಕ್, ವಿ ಸೋಮಣ್ಣ. ಇವರೆಲ್ಲರನ್ನೂ ಮೂಲೆಗುಂಪು ಮಾಡಿದರೆ, ಕರ್ನಾಟಕದ ನಾಯಕನೊರ್ವನನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಹಾಕಿಕೊಂಡಿದೆಯೇ ಭಾಜಪ ಎಂಬ ಅನುಮಾನ ಕಾಡುತ್ತಿದೆ. ಸೋಮಣ್ಣ ಹಾಗೂ ಆಶೋಕ್ ಅವರನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಸೆಣಸಲು ಹೇಳಿದ್ದು, ಓದುಗರ ಆತ್ಮೀಯ ಸುವರ್ಣ ಲೋಕ ದಿನಪತ್ರಿಕೆ ರಾಜ್ಯರಾಜಕೀಯ ವಿಶ್ಲೇಷಣೆಗೆ ಸದಾ ಮುಂದಾಗಿದೆ.