ಧಾರವಾಡ : ದೆಹಲಿ ಮೂಲದ ಸಿಲ್ವರ್ ಜೋನ್ ಪೌಂಡೆಶನ್ ಸಂಸ್ಥೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಜೆ.ಎಸ್.ಎಸ್. ಸಿಬಿಎಸ್ ಸಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಶ್ರೇಯಾಂಕಾ ಎಸ್. ಹಿರೇಮಠ ಅತಿ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಹಾಗೂ ಪ್ರಮಾಣಪತ್ರ ಪಡೆದಿದ್ದಾಳೆ.
ಅದೇ ರೀತಿ ಇಂಗ್ಲಿಷ್ ವಿಭಾಗದಲ್ಲಿ ಮೊಹಮ್ಮದ ಫಾಜಿಲ್, ಗಣಿತ ವಿಭಾಗದಲ್ಲಿ ಅವಿಶ ಶೆಟ್ಟಿ ಅವರು ಅತಿ ಹೆಚ್ಚು ಅಂಕದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ಪರೀಕ್ಷಾ ಸಂಯೋಜಕರಾಗಿ ಶಿಕ್ಷಕರಾದ ಕುಮುದಾ ಬನ್ನೂರ (ವಿಜ್ಞಾನ), ಪ್ರಸಾದ ಪೂಜಾರ (ಗಣಿತ) ಮತ್ತು ಶ್ವೇತಾ ಪಾಟೀಲ (ಇಂಗ್ಲಿಷ್) ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಕರ್ತವ್ಯ ನಿರ್ವಹಿಸಿದ್ದರು.
ಜೆಎಸ್ಎಸ್ ಶಾಲೆಯಿಂದ 1 ರಿಂದ 10 ನೇ ತರಗತಿ ವರೆಗಿನ ಒಟ್ಟು ವಿಜ್ಞಾನ ವಿಭಾಗಕ್ಕೆ 132, ಗಣಿತ ವಿಭಾಗಕ್ಕೆ 122 ಮತ್ತು ಇಂಗ್ಲಿಷ್ ವಿಭಾಗಕ್ಕೆ 68 ಜನ ವಿದ್ಯಾರ್ಥಿಗಳು ಸೇರಿ ಒಟ್ಟು 322 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಒಲಂಪಿಯಾಡ್ ಪರೀಕ್ಷೆಗೆ ಹಾಜರಾಗಿದ್ದರು.
ಇವರಲ್ಲಿ ವಿಜ್ಞಾನದಲ್ಲಿ 35, ಗಣಿತದಲ್ಲಿ 22, ಇಂಗ್ಲಿಷ್ ವಿಷಯದಲ್ಲಿ 24 ವಿದ್ಯಾರ್ಥಿಗಳು ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.
ಅಂತರಾಷ್ಟ್ರೀಯ ಒಲಂಪಿಯಾಡ್ ಪರೀಕ್ಷೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಶಾಲೆಯ ಪ್ರಾಂಶುಪಾಲೆ ಲಿಲಿಯನ್ ಅಂಥೋನಿ ಶಾನ್.ಜಿ ಅವರು ಶಾಲೆಯ ಸಮಾರಂಭದಲ್ಲಿ, ಇಂದು ಬೆಳಿಗ್ಗೆ ವಿಜೇತ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಬೋಧಕ ಬೋಧಕ್ಕೆತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ, ವಿದ್ಯರ್ಥಿನೀಯರು ಉಪಸ್ಥಿತರಿದ್ದರು.