ಬೆಳಗಾವಿ : ರಾಷ್ಟ್ರೀಯವಾದ ಮುಂದಿಟ್ಟುಕೊಂಡು ಹಾಗೂ ಮೋದಿ ಅವರ ಮುಖವನ್ನು ಬಿಜೆಪಿ ತೋರಿಸುತ್ತಿದೆ. ಇತ್ತ ಪ್ರತಿಪಕ್ಷ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೊಂದಿಗೆ ಬಿಜೆಪಿಯ ಲೋಪಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಗೆ ಮೋದಿ ಮುಖವಾಗಿದ್ದರೆ, ಕೈಗೆ ಗ್ಯಾರಂಟಿ ಬಂಡವಾಳವಾಗಿದೆ.
ಬಿಜೆಪಿ ನಾಯಕರು ಬಾಯಿ ಬಿಟ್ಟರೆ ಸಾಕು ವಿಶ್ವನಾಯಕವಾಗಿ ಹೊರಹೊಮ್ಮಿರುವ ಮೋದಿ ಮುಖ ನೋಡಿ ಮತಹಾಕಿ ಎನ್ನುತ್ತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಯಾವುದೇ ಕಡಿಮೆ ಇಲ್ಲ, ರಾಜ್ಯದಲ್ಲಿ ಬಡವರ್ಗ, ಮಹಿಳೆಯರಿಗಾಗಿ ಪಂಚಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಅಲ್ಲದೇ ದೇಶದಲ್ಲಿ ಬಿಜೆಪಿ ಸಾಧನೆ ಶೂನ್ಯವಾಗಿದ್ದಲ್ಲದೇ ಹಲವು ಲೋಪಗಳನ್ನು ಮಾಡಿದೆ, ಅವುಗಳನ್ನು ಸರಿಪಡಿಸಲು ಕಾಂಗ್ರೆಸ್‌ಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.
ಈ ಎರಡು ರಾಷ್ಟ್ರೀಯ ಪಕ್ಷಗಳ ಪ್ರಚಾರದಿಂದ ಮತದಾರರು ಸದ್ಯ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹಿಂದುತ್ವದ ಅಲೆಯಲ್ಲಿರುವ ಬಿಜೆಪಿಗೆ ಬೆಂಬಲಿಸಬೇಕೋ ಅಥವಾ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಜನರಿಗೆ ಮುಟ್ಟಿಸುತ್ತಿರುವ ಕಾಂಗ್ರೆಸ್‌ಗೆ ಬೆಂಬಲಿಸಬೇಕೋ ಎಂಬ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ಹೈಡ್ರಾಮಾವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಮತದಾರ ಪ್ರಭು ಯಾರಿಗೆ ಆಶಿರ್ವದಿಸುತ್ತಾನೆ ಎಂಬುವುದು ಮಾತ್ರ ನಿಗೂಢವಾಗಿದೆ.