ಚುನಾವಣಾಧಿಕಾರಿಗಳ ಭರ್ಜರಿ; ಸೂಕ್ತ ದಾಖಲೆಗಳಿಲ್ಲದೇ 5 ಕೋಟಿ ರೂ. ಹಣ ಸಾಗಾಟ: ಐವರ ಬಂಧನ

ಚುನಾವಣಾಧಿಕಾರಿಗಳ ಭರ್ಜರಿ; ಸೂಕ್ತ ದಾಖಲೆಗಳಿಲ್ಲದೇ 5 ಕೋಟಿ ರೂ. ಹಣ ಸಾಗಾಟ: ಐವರ ಬಂಧನ

ಬಾಗಲಕೋಟೆ: ಸೂಕ್ತ ದಾಖಲೆಗಳಿಲ್ಲದೇ 5 ಕೋಟಿ ರೂ. ಹಣವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಆರೋಪಿಯನ್ನು , ಮುಧೋಳ ಚುನಾವಣಾಧಿಕಾರಿಗಳು, ಪೊಲೀಸ್‌ ರು ವಶಪಡಿಸಿಕೊಂಡಿರುವ ಘಟನೆ ಲೋಕಾಪುರ ಬಳಿ ನಡೆದಿದೆ.

ಲೋಕಾಪುರ ಬಳಿಯ ಲಕ್ಷಾನಟ್ಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ವಾಹನ
ಸಮರ್ಪಕ ದಾಖಲೆಗಳಿಲ್ಲದ ಹಿನ್ನೆಲೆ ವಾಹನ ಜಪ್ತಿ ಮಾಡಿ, ಕಾರಿನಲ್ಲಿದ್ದ ಐವರನ್ನು ಬಂಧಿಸಲಾಗಿದೆ.

ಹುಬ್ಬಳ್ಳಿಯಿಂದ ಮುಧೋಳಕ್ಕೆ ಸಾಗಿಸುತ್ತಿದ್ದಾಗ ಜಪ್ತಿ. ಯೂನಿಯನ್ ಬ್ಯಾಂಕ್‌ಗೆ ಸೇರಿದ ಹಣದ ಬಗ್ಗೆ ಮಾಹಿತಿ. ಹಣವನ್ನು ಸಾಗಿಸಲು ಭದ್ರತಾ ಬೊಲೆರೊ ವಾಹನ. ಹುಬ್ಬಳ್ಳಿ ಯೂನಿಯನ್ ಬ್ಯಾಂಕ್ ನಿಂದ ಮುಧೋಳ ಯೂನಿಯನ್ ಬ್ಯಾಂಕ್ ಗೆ ಸಾಗಿಸಲಾಗಿತ್ತು. ಆದರೆ, ಸರಿಯಾದ ದಾಖಲೆಗಳನ್ನು ಒದಗಿಸಲು ವಿಫಲವಾದ ಹಿನ್ನೆಲೆ ಮುಟ್ಟುಗೋಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.