This is the title of the web page
This is the title of the web page

ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸ್ಥಳೀಯ ಸಂಸ್ಥೆಗೆ ಬರಬೇಕಿದ್ದ ₹೮೦.೪೨ ಲಕ್ಷ ಹಣ ಬಾಕಿ ಉಳಿದುಕೊಂಡಿದೆ

ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸ್ಥಳೀಯ ಸಂಸ್ಥೆಗೆ ಬರಬೇಕಿದ್ದ ₹೮೦.೪೨ ಲಕ್ಷ ಹಣ ಬಾಕಿ ಉಳಿದುಕೊಂಡಿದೆ

 

ರಾಯಬಾಗ;  ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗುವುದರ ಜತೆಗೆ ಸ್ಥಳೀಯ ಸಂಪನ್ಮೂಲಗಳನ್ನು ಕ್ರೂಢೀಕರಣ ಮಾಡಿಕೊಂಡು ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ ಎಂಬ ಸದುದ್ದೇಶದಿಂದ ಸರ್ಕಾರ ವಿವಿಧ ಹಣಕಾಸು ಯೋಜನೆಗಳ ಮೂಲಕ ಲಕ್ಷಾಂತರ ಹಣವನ್ನು ನೀಡುತ್ತದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸ್ಥಳೀಯ ಸಂಸ್ಥೆಗೆ ಬರಬೇಕಿದ್ದ ₹೮೦.೪೨ ಲಕ್ಷ ಹಣ ಬಾಕಿ ಉಳಿದುಕೊಂಡಿರುವುದು ಬೆಳಿಕಿಗೆ ಬಂದಿದೆ.

ರಾಯಬಾಗ ಪಟ್ಟಣ ಪಂಚಾಯತಿಯುವ ಪಟ್ಟಣದಲ್ಲಿ ೧೨೧ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಆಧಾರದಲ್ಲಿ ನೀಡಿದೆ. ಆದರೆ ೨೦೧೮-೨೦೧೯ ರಿಂದ ೨೦೨೧-೨೦೨೨ವರೆಗೆ ಸುಮಾರು ನಾಲ್ಕು ವರ್ಷಗಳ ಕಾಲ ನಿಗದಿಪಡಿಸಿದ ಬಾಡಿಗೆಯನ್ನೇ ವಸೂಲಿ ಮಾಡಿಕೊಳ್ಳಲು ಪಟ್ಟಣ ಪಂಚಾಯತಿ ಅಧಿಕಾರಿಗಳು ಮುಂದಾಗಿಲ್ಲ. ಆದ್ದರಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪಟ್ಟಣ ಪಂಚಾಯತಿಗೆ ಬರಬೇಕಿದ್ದ ಒಟ್ಟು ₹ ೮೦೪೨೫೩೮ ಬಾಡಿಗೆ ಬಾಕಿ ಉಳಿದುಕೊಂಡಿರುವುದು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಅವರು ಪಡೆದಿರುವ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ. ೨೦೧೮-೧೯ ರಲ್ಲಿ ₹೪೨೬೫೯೭೧ ರಷ್ಟಿದ್ದ ಬಾಕಿ ಹಣ, ೨೦೧೯-೨೦ ರಲ್ಲಿ ₹೫೫೭೨೯೬೭ಕ್ಕೆ ಏರಿಕೆ ಆಗಿದೆ. ೨೦೨೦-೨೧ರಲ್ಲಿ ₹೬೫೨೫೩೭೭ ಹಾಗೂ ೨೦೨೧-೨೨ ರಲ್ಲಿ ₹೮೦೪೨೫೩೮ಕ್ಕೆ ಬಂದು ತಲುಪಿದೆ.
ಅಲ್ಲದೇ ಈ ಕುರಿತು ಲೆಕ್ಕ ಪರಿಶೋಧನಾ ವರದಿಯಲ್ಲಿಯೂ ಪಟ್ಟಣ ಪಂಚಾಯತಿಯ ಬೇಜವಾಬ್ದಾರಿಯನ್ನು ಉಲ್ಲೇಖಿಸಲಾಗಿದೆ. ಆಯವ್ಯಯ ಮತ್ತು ಲೆಕ್ಕಪತ್ರ ನಿಯಮಗಳು-೨೦೦೬ರ ನಿಯಮ ೫೩(೧) ರ ಪ್ರಕಾರ ಕೆಎಂಎಫ್ ನಮೂನೆ ನಂ೨೫ರಲ್ಲಿ ವಹಿ ನಿರ್ವಹಿಸಿಲ್ಲ. ೧೦೮ ಮಳಿಗೆಗಳನ್ನು ಯಾವ ಅವಧಿಯಿಂದ ಹರಾಜು ಮಾಡಿ ೧೨ ವರ್ಷಗಳವರೆಗೆ ಲೀಸ್ ಮೇಲೆ ಬಾಡಿಗೆ ನೀಡಿರುವ ಬಗ್ಗೆ ದಾಖಲೆಗಣನ್ನು ಲಭ್ಯಪಡಿಸಿಲ್ಲ. ಬಾಡಿಕೆ ನೀಡಲಾಗಿರುವ ಮಳಿಗೆಗಳ ಬಾಡಿಗೆಯನ್ನು ಪ್ರತಿ ೩ ವರ್ಷಕ್ಕಿನ್ನೆ ಶೇ.೧೦ ರಷ್ಟು ಹೆಚ್ಚಿಸಬೇಕು. ಆದರೆ ಅಂಕಿ, ಅಂಶಗಳನ್ನು ಪರಿಶೀಲಿಸಿದಾಗ ಬೇಡಿಕೆ ಮ್ತೊತ ಹೆಚ್ಚಿಸದೇ ಇರುವುದರಿಂದ ಪಟ್ಟಣ ಪಂಚಾಯತಿಗೆ ಬರಬೇಕಾದ ಆದಾಯ ನಷ್ಟವಾಗಿದೆ. ಅಲ್ಲದೇ ಸ್ದಳೀಯ ಸಂಸ್ಥೆಗೆ ಬರಬೇಕಾದ ಆದಾಯ ನಿಗದಿತ ಅವಧಿಯಲ್ಲಿ ಬಾರದಿರುವುದೆ ಆದಾಯ ನಷ್ಟಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿ ಜವಾಬ್ದಾರರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಾಕಿ ಉಳಿಸಿಕೊಂಡಿರುವ ₹೮೦೪೨೫೩೮ ಹಣವನ್ನು ದಂಡದೊಂದಿಗೆ ವಸೂಲಿ ಮಾಡಲು ಸೂಚಿಸಿದೆ.
ಈ ಎಲ್ಲ ದಾಖಲೆಗಳನ್ನು ಮಾಹಿತಿ ಹಕ್ಕಿ ಪಡೆದುಕೊಂಡಿರುವ ಸುರೇಂದ್ರ ಉಗಾರೆ ಅವರು ಪ್ರಾದೇಶಿಕ ಆಯುಕ್ತರ ಮೂಲಕ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿ ಪತ್ರ ಬರೆದಿದ್ದು, ವಿಶೇಷ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಿ, ಅಮಾನತುಗೊಳಿಸುವುದರ ಜತೆಗೆ ಲೀಸ್ ಮೇಲೆ ಬಾಡಿಗೆ ನೀಡಿರುವ ಮಳಿಗೆಗಳ ಬಾಕಿ ಉಳಿಸಿಕೊಂಡಿರುವ ಹಣವನ್ನು ವಸೂಲಿಗೆ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.