ಬಂಡೀಪುರವನ್ನು ಅದಾನಿ ಮಾರಬೇಡಿ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಟ್ವೀಟ್

ಬಂಡೀಪುರವನ್ನು ಅದಾನಿ ಮಾರಬೇಡಿ: ಪ್ರಧಾನಿ ಮೋದಿಗೆ  ಕಾಂಗ್ರೆಸ್ ಟ್ವೀಟ್

ಮೈಸೂರು, ಏ 9, ಅಮುಲ್ ಹಾಗೂ ನಂದಿನಿ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ. ಇದೀಗ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಸರಂಕ್ಷಿತಾರಣ್ಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಕಾಲೆಳೆದಿದೆ.

ದಯವಿಟ್ಟು ಬಂಡೀಪುರವನ್ನು ಅದಾನಿ ಮಾರಬೇಡಿ
ಇಂದು ನೀವು ಬಂಡೀಪುರ ಹುಲಿ ಅರಣ್ಯಕ್ಕೆ ಭೇಟಿ ನೀಡಿ ಸಫಾರಿ ಮಾಡಿ ಆನಂದಿಸುತ್ತಿದ್ದೀರಿ. 1973 ರ ಬಂಡೀಪುರ ಹುಲಿ ಸಂರಕ್ಷಣಾ ಯೋಜನೆಯಿಂದಾಗಿ ಇಂದು ಅಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕಾಂಗ್ರೆಸ್‌ 70ವರ್ಷದಲ್ಲಿ ಏನು ಮಾಡಿದೆ ಎನ್ನು ನೀವು (ನರೇಂದ್ರ ಮೋದಿ) ಇಂದು ಸಫಾರಿ ಮಾಡುತ್ತಿದ್ದೀರಿ. ನಾವು ನಿಮಗೆ ಮಾಡುವ ಮನವಿ ಏನೆಂದರೆ ದಯವಿಟ್ಟು ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದು ಟೀಕಿಸಿರುವ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಂಡಿಪುರ ಹುಲಿ ಸಂರಕ್ಷಣಾ ಅರಣ್ಯ ಸಫಾರಿಯಲ್ಲಿ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

50 ವರ್ಷಗಳ ಹಿಂದೆ ಬಂಡಿಪುರದಲ್ಲಿ ಆರಂಭಿಸಿದ ಹುಲಿ ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ಸಂಪೂರ್ಣ ಶ್ರೇಯಸ್ಸು ಪಡೆದುಕೊಳ್ಳಲಿದ್ದಾರೆ. ಅವರು ಅದ್ಭುತ ವೀಕ್ಷಣೆಯ ಅನುಭವ ಪಡೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ರಾಷ್ಟ್ರೀಯ ಸಂಪತ್ತನ್ನು ಉದ್ಯಮಿ ಗೌತಮ್ ಅದಾನಿ ಅವರಿಗೆ ಮಾರಾಟ ಮಾಡಬೇಡಿ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.