This is the title of the web page
This is the title of the web page

ಡಿಕೆಶಿ ಹೆಗಲಿಗೆ ಬೆಂಗಳೂರು ಉಸ್ತುವಾರಿ ಯಾವ ಜಿಲ್ಲೆಗೆ ಉಸ್ತುವಾರಿಗಳ ನೇಮಕ

ಡಿಕೆಶಿ ಹೆಗಲಿಗೆ ಬೆಂಗಳೂರು ಉಸ್ತುವಾರಿ ಯಾವ ಜಿಲ್ಲೆಗೆ ಉಸ್ತುವಾರಿಗಳ ನೇಮಕ

 

ಬೆಂಗಳೂರು, ಜೂ 9: ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೇ ದೊಡ್ಡ ತಲೆನೋವಾಗಿದ್ದು, ಕೊನೆಗೂ ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್​​ನಲ್ಲಿ ಭರ್ಜರಿ ಪೈಪೋಟಿ ಶುರುವಾಗಿದ್ದು, ಸಚಿವರು ಕೂಡ ಭರ್ಜರಿ ಲಾಬಿ ನಡೆಸಿದ್ದರು. ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಣತೊಟ್ಟಿದ್ದು, ಹಲವು ಸಚಿವರು ತಮ್ಮ ತಮ್ಮ ಜಿಲ್ಲೆಯ ಮೇಲೆ ಕಣ್ಣೀಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರಿಗೆ ಜಿಲ್ಲಾ ಉಸ್ತುವಾರಿಯನ್ನ ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ಉಸ್ತುವಾರಿ ಸಚಿವ- ಡಿ.ಕೆ.ಶಿವಕುಮಾರ್​

ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್​

ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್​.ಕೆ.ಪಾಟೀಲ್

ಬೆಂಗಳೂರು ಗ್ರಾಮಾಂತರ-ಕೆ.ಹೆಚ್​.ಮುನಿಯಪ್ಪ

ರಾಮಲಿಂಗಾರೆಡ್ಡಿ-ರಾಮನಗರ

ಕೆ.ಜೆ.ಜಾರ್ಜ್​-ಚಿಕ್ಕಮಗಳೂರು

ಎಂ.ಬಿ.ಪಾಟೀಲ್​-ವಿಜಯಪುರ

ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ

ಹೆಚ್​.ಸಿ.ಮಹದೇವಪ್ಪ-ಮೈಸೂರು,

ಸತೀಶ್ ಜಾರಕಿಹೊಳಿ-ಬೆಳಗಾವಿ

ಪ್ರಿಯಾಂಕ್​ ಖರ್ಗೆ-ಕಲಬುರಗಿ

ಶಿವಾನಂದಪಾಟೀಲ್-ಹಾವೇರಿ

ಜಮೀರ್​ ಅಹ್ಮದ್ ಖಾನ್​​-ವಿಜಯನಗರ

ಶರಣಬಸಪ್ಪ ದರ್ಶನಾಪುರ-ಯಾದಗಿರಿ

ಈಶ್ವರ್ ಖಂಡ್ರೆ-ಬೀದರ್,

ಚಲುವರಾಯಸ್ವಾಮಿ-ಮಂಡ್ಯ

ಎಸ್​.ಎಸ್​.ಮಲ್ಲಿಕಾರ್ಜುನ್​-ದಾವಣಗೆರೆ

ಸಂತೋಷ್ ಲಾಡ್-ಧಾರವಾಡ

ಶರಣಪ್ರಕಾಶ್ ಪಾಟೀಲ್​-ರಾಯಚೂರು

ಆರ್​.ಬಿ.ತಿಮ್ಮಾಪುರ-ಬಾಗಲಕೋಟೆ

ಕೆ.ವೆಂಕಟೇಶ್​-ಚಾಮರಾಜನಗರ

ಕೊಪ್ಪಳ-ಶಿವರಾಜ್​ ತಂಗಡಗಿ

ಡಿ.ಸುಧಾಕರ್​-ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ

ಬಿ.ನಾಗೇಂದ್ರ-ಬಳ್ಳಾರಿ

ಕೆ.ಎನ್​.ರಾಜಣ್ಣ-ಹಾಸನ

ಭೈರತಿ ಸುರೇಶ್​-ಕೋಲಾರ

ಲಕ್ಷ್ಮೀ ಹೆಬ್ಬಾಳ್ಕರ್​-ಉಡುಪಿ

ಮಂಕಾಳ್ ವೈದ್ಯ-ಉತ್ತರ ಕನ್ನಡ

ಮಧು ಬಂಗಾರಪ್ಪ-ಶಿವಮೊಗ್ಗ

ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ

ಎನ್​.ಎಸ್​.ಬೋಸರಾಜು-ಕೊಡಗು