ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಮಣೆಹಾಕಲಾಗಿದೆ.
ಗೋಕಾಕದಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜದ ಡಾ ಮಹಾಂತೇಶ ಕಡಾಡಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪೈನಲ್ ಮಾಡಿ, ಎಲ್ಲರಿಗೂ ಶಾಕ್
ಕಾಂಗ್ರೆಸ್‌ಗೆ ಕರೆಸಿ ನಡು ನೀರಿನಲ್ಲಿ ಕೈ ಬಿಟ್ಟರಾ, ಪ್ರಬಲ ಲಿಂಗಾಯತ ಅಭ್ಯರ್ಥಿಯನ್ನು ಕೈ ಬಿಟ್ಟ ಕಾಂಗ್ರೆಸ್
ಬೆಳಗಾವಿ: ಟಿಕೆಟ್ ನೀರಿಕ್ಷೆ ಮೇಲೆ ಇತ್ತೀಚೆಗೆ ಕೈ ಪಕ್ಷ ಸೇರ್ಪಡೆಗೊಂಡಿದ್ದ ಅಶೋಕ ಪೂಜಾರಿಗೆ ಕಾಂಗ್ರೆಸ್ ಕೈ ಕಮಾಂಡ್ ಶಾಕ್ ನೀಡಿದ್ದು, ಗೋಕಾಕ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಹೊಸಮುಖಕ್ಕೆ ಮಣೆಹಾಕಲಾಗಿದೆ. ಟಿಕೆಟ್ ನೀರಿಕ್ಷೆ ಹಿನ್ನಲೆಯಲ್ಲಿ ಅಶೋಕ ಪೂಜಾರಿ 8 ತಿಂಗಳು ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ವೃತ್ತಿಯಿಂದ ವೈದ್ಯರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಡಾ ಮಹಾಂತೇಶ ಕಡಾಡಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪೈನಲ್ ಮಾಡಿ, ಎಲ್ಲರಿಗೂ ಶಾಕ್ ನೀಡಿದೆ.
ಅಶೋಕಗೆ ನಿರಾಸೆ:
ಗೋಕಾಕ ಕ್ಷೇತ್ರದಿಂದ ಟಿಕೆಟ್ ಸಿಗುವ ಬಹಳ ನಂಬಿಕೆಯಿಂದ ಹಾಗೂ ಕರಾರಿನ ಮೇಲೆಯೆ ತಮ್ಮನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂದು ಪೂಜಾರಿ ಹೇಳಿಕೊಂಡಿದ್ದರು. ಆದರೆ ಈಗ ಕಾಂಗ್ರೆಸ್ ವರಿಷ್ಠರು ಈ ಎಲ್ಲ ನಿರೀಕ್ಷೆಗಳನ್ನು ಹುಸಿಮಾಡಿ ಅಚ್ಚರಿ ಪಡುವಂತೆ ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್ ನೀಡಿದ್ದಾರೆ. ಈಗ ಅಶೋಕ ಪೂಜಾರಿ ಅವರ ಮುಂದಿನ ನಿರ್ಧಾರ ಕುತೂಹಲ ಹುಟ್ಟಿಸಿದೆ.