This is the title of the web page
This is the title of the web page

ಏ.18ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ : ಧರ್ಮ ಯುದ್ಧಕ್ಕೆ ಎಲ್ಲ ಸಮಾಜದವರ ಹಾಗೂ ರೈತ ಸಂಘಟನೆಗಳ ಬೆಂಬಲ ಸಿಕ್ಕಿದೆ: ದಿಂಗಾಲೇಶ್ವರ ಸ್ವಾಮೀಜಿ

ಏ.18ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ  : ಧರ್ಮ ಯುದ್ಧಕ್ಕೆ ಎಲ್ಲ ಸಮಾಜದವರ ಹಾಗೂ ರೈತ ಸಂಘಟನೆಗಳ ಬೆಂಬಲ ಸಿಕ್ಕಿದೆ: ದಿಂಗಾಲೇಶ್ವರ ಸ್ವಾಮೀಜಿ

 

ಹುಬ್ಬಳ್ಳಿ:  ನಮ್ಮ ಬೆಂಬಲಿಗರನ್ನು ಹೆದರಿಸುವ, ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಏ.18ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು ಮಠಾಧೀಶರು ಭಾಗಿಯಾಗುವುದು ಬೇಡ ಎಂದಿದ್ದೇನೆ. ಒಂದು ಮಠದ ಸಮಸ್ಯೆಗಾಗಿ ನಾನು ಸ್ಪರ್ಧಿಸುತ್ತಿಲ್ಲ, ನಾಡಿನ ಹಿತಕ್ಕಾಗಿ ನಿಂತಿದ್ದೇವೆ. ಮನೆಗೆ ಹೋದರೂ ಮಾತನಾಡಿಸದಂತಹ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಇದೀಗ ಕರೆದು ಮಾತನಾಡಿಸುತ್ತಿದ್ದಾರೆ, ಎಲ್ಲ ಸಮಾಜಗಳೊಂದಿಗೆ ಸಭೆ ಮಾಡುತ್ತಿದ್ದಾರೆ ಎಂದರೆ ಅವರಿಗೆ ಸೋಲಿನ ಭಯ ಕಾಡಿದಂತೆ ಕಾಣುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರಂಭಿಸಿರುವ ಧರ್ಮ ಯುದ್ಧಕ್ಕೆ ಎಲ್ಲ ಸಮಾಜದವರು ಬೆಂಬಲ ನೀಡಿದ್ದಾರೆ. ನನ್ನ ಪರ ಒಲವು ತೋರುವವರನ್ನು ಹೆದರಿಸಿ ಬೆದರಿಸುವ ಕೆಲಸ ನಡೆದಿದೆ. ಏ.18ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು ಮಠಾಧೀಶರು ಭಾಗಿಯಾಗುವುದು ಬೇಡ ಎಂದಿದ್ದೇನೆ. ಒಂದು ಮಠದ ಸಮಸ್ಯೆಗಾಗಿ ನಾನು ಸ್ಪರ್ಧಿಸುತ್ತಿಲ್ಲ, ನಾಡಿನ ಹಿತಕ್ಕಾಗಿ ನಿಂತಿದ್ದೇವೆ.

ನಮ್ಮ ಬೆಂಬಲಿಗರನ್ನು ಹೆದರಿಸುವ, ಬೆದರಿಸುವ ಕೆಲಸ ಮಾಡುತ್ತಿದ್ದಾರೆ, ಭಯವನ್ನುಂಟು ಮಾಡುತ್ತಿದ್ದಾರೆ, ಆದರೆ ಭಕ್ತರು ನಾವೆಲ್ಲರೂ ಒಳಗಿಂದಳೊಗೆ ಎಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಜನರ ಮನವೂಲಿಸುವ ಕೆಲಸ ಮಾಡಬೇಕೆ, ಹೊರತು, ಹೆದರಿಸಿ, ಬೆದರಿಸುವ ಕೆಲಸ ಮಾಡಬಾರದು ಎಂದರು.
ನಮ್ಮ ತೇಜೋವಧೆಗೆ ಯತ್ನಗಳನ್ನು ಮಾಡುತ್ತಿದ್ದು, ಅದನ್ನು ಮಾಡಿಸುತ್ತಿದ್ದಾರೆ, ಆಸೆ ಆಮಿಷಗಳನ್ನು ಹಾಕಿ ಸುತ್ತಾ ನಿಂದನೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನದಿಂದ ಇರಬೇಕು ಎಂದು ಅಕ್ಕಮಹಾದೇವಿ ಹೇಳಿದರೇ, ಬಸವಣ್ಣನವರು, ನಿಂದಿಸುವನು ಒಬ್ಬ, ಸ್ತುತಿಸುವವನೊಬ್ಬ ಇವರಿಬ್ಬರು ನಮ್ಮ ಪರಮಶಿವನ ಬಂಧುಗಳಯ್ಯ ಎಂದು ಹೇಳಿದ್ದಾರೆ.