ಬೆಳಗಾವಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಮತ್ತು ದೇಶದ ಐತಿಹಾಸಿಕ ಸಮಾವೇಶಕ್ಕೆ ಕ್ಷಣ ಗಣನೆ ಪ್ರಾರಂಭ ಆಗುತ್ತಿದೆ ಡಿಸಿಎಂ ಡಿ ಕೆ ಶಿವಕುಮಾರ್ “ಜೈ ಬಾಪು ಜೈ ಭೀಮ್ ಜೈ ಸಂವಿಧಾನ” ಸಮಾವೇಶ ನಡೆಯಲಿರುವ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಭಾನುವಾರ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಹೆಸರಿನಲ್ಲಿ ಕಾರ್ಯಕ್ರಮ ಹೈಕಮಾಂಡ್ ಸೂಚನೆ ಮೇರೆಗೆ ಹೆಸರಿಟ್ಟು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು. ದೇಶದ ಐಕ್ಯತೆ ಕಾಪಾಡಲು, ಸಂವಿಧಾನ ರಕ್ಷಣೆ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಲು ಈ ಸಮಾವೇಶ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲಾ.ಇದು ದೇಶದ ಸಂವಿಧಾನ ಉಳಿಸುವಂತಹದ್ದು. ಪಕ್ಷ ಬೇಧ ಮರೆತು, ಬಿಜೆಪಿ ಸದಸ್ಯತ್ವ ತೆಗೆದುಕೊಂಡವರನ್ನು ಬಿಟ್ಟು.ಸಂವಿಧಾನ ಬಗ್ಗೆ ಗೌರವ ಕೊಡಬೇಕು ಅಂತಾ ಕಾಯುವವರು ಸಮಾವೇಶಕ್ಕೆ ಬನ್ನಿ ಎಂದು ಕರೆ ನೀಡಿದರು.
ಗಾಂಧೀಜಿಯವರ ಸ್ಥಾನದಲ್ಲಿ ಇಂದು ಖರ್ಗೆ ಅವರು ಕುಳಿತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರು ಬರ್ತಿದ್ದಾರೆ. ಇಡೀ ವರ್ಷ ಸರ್ಕಾರದಿಂದ ಕಾರ್ಯಕ್ರಮಗಳು ನಡೆಯುತ್ತವೆ ಎಂದರು. ಸಚಿವ ಡಾ ಎಂ ಸಿ ಸುಧಾಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ಎಂಎಲ್ಸಿ ಎಸ್ ರವಿ ಮತ್ತಿತರರು ಉಪಸ್ಥಿತರಿದ್ದರು.