ಬೆಂಗಳೂರು,ಮೇ,25:ಸೋಲಿನ ಹೊಣೆ ಯಾರದ್ದು ಬಿಜೆಪಿ? ಅಮಿತ್ ಶಾ ಅವರದ್ದೋ? ಬೊಮ್ಮಾಯಿಯವರದ್ದೋ? ಮೋದಿಯವರದ್ದೋ ? ನಳಿನ್ ಕಟೀಲರದ್ದೋ? ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರು? ಎಂದು ಬಿಜೆಪಿ ನಾಯಕರ ಕಾಲೆಳೆದಿದೆ ಕಾಂಗ್ರೆಸ್ .ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬದ ಬಗ್ಗೆ ಟೀಕಿಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊರುವವರು, ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರೂ ಇಲ್ಲವೇ ಬಿಜೆಪಿಯಲ್ಲಿ!?
ಗ್ಯಾರಂಟಿ ಯೋಜನೆ ಜಾರಿ ಕುರಿತು ಟೀಕಿಸಿದ ಬಿಜೆಪಿಗೆ ಮತ್ತೊಂದು ಟ್ವಿಟ್ ಮಾಡಿ ತಿರುಗೇಟು ನೀಡಿರುವ ಕಾಂಗ್ರೆಸ್, ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಗ್ಯಾರಂಟಿ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಬಿಜೆಪಿ ನಾಯಕರು ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಲಿ, ಹಾಗೆಯೇ ‘ವಿರೋಧಪಕ್ಷದ ನಾಯಕ’ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿಕೊಳ್ಳಲಿ ಎಂದು ಲೇವಡಿ ಮಾಡಿದೆ.