ಬೆಳಗಾವಿ, ಬಾಗಲಕೋಟೆ, ಮಂಡ್ಯದಲ್ಲಿ ಎಥೆನಾಲ್ ಘಟಕ
ಪತ್ರಕರ್ತರ ಕ್ಷೇಮಾಭಿವೃದ್ಧಿ ಸ್ಥಾಪನೆ- 500 ಕೋಟಿ
*ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋಧಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ
ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂ.ಗಳಿಂದ 15,000 ರೂಪಾಯಿಗೆ ಹೆಚ್ಚಳ
*ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷದವರೆಗೆ ವಿಸ್ತರಣೆ
ಬೆಂಗಳೂರು: ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್, ಮುಂದೆ ಅಧಿಕಾರಕ್ಕೆ ಬಂದಾಗ ಮುಂದಿನ ಐದು ವರ್ಷ ತಮ್ಮ ಪಕ್ಷ ಯಾವೆಲ್ಲಾ ಯೋಜನೆಗಳನ್ನು ತರಲಿದೆ ಎಂಬುದರ ನೀಲ ನಕ್ಷೆಯನ್ನು ಪ್ರಣಾಳಿಕೆ ರೂಪದಲ್ಲಿ ಬಿಡುಗಡೆ ಮಾಡಿದೆ.
ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಾಯಕ ರಣ್ದೀಪ್ ಸುರ್ಜೇವಾಲಾ ಉಪಸ್ಥಿತರಿದ್ದರು.
ಕಾಂಗ್ರೆಸ್ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳು
1.ಗೃಹ ಜ್ಯೋತಿ
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್
2.ಅನ್ನಭಾಗ್ಯ
ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ
3.ಗೃಹ ಲಕ್ಷ್ಮಿ
ಮನೆಯೊಡತಿಗೆ ₹2 ಸಾವಿರ ಮಾಸಿಕ ಸಹಾಯ ಧನ
4.ಯುವ ನಿಧಿ
ಪದವೀಧರರಿಗೆ ₹3000 ನಿರುದ್ಯೋಗ ಭತ್ಯೆ
ಡಿಪ್ಲೊಮಾ ಪದವೀಧರರಿಗೆ ₹1,500 ಮಾಸಿಕ ಭತ್ಯೆ
5.ಸಖಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಇತರೆ ಘೋಷಣೆಗಳು
*ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋಧಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ
*ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂ.ಗಳಿಂದ 15,000 ರೂಪಾಯಿಗೆ ಹೆಚ್ಚಳ
*ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರೂ.ಗಳಿಂದ 10,000 ರೂಪಾಯಿಗೆ ಏರಿಕೆ
*ಆಶಾ ಕಾರ್ಯಕರ್ತೆಯರ ನಿಶ್ಚಿತ ಗೌರವ ಧನ 5000 ರೂ.ಗಳಿಂದ 8,000 ರೂ.ಗೆ ಹೆಚ್ಚಳ
*ಬಿಸಿಯೂಟದ ಅಡಿಗೆಯವರ ಗೌರವ ಧನ 3,600 ರೂ.ಗಳಿಂದ 6,000 ರೂಪಾಯಿಗೆ ಹೆಚ್ಚಳ
*ಪೊಲೀಸ್ ವ್ಯವಸ್ಥೆಯಲ್ಲಿ ಶೇ.33ರಷ್ಟು ಮಹಿಳೆ ಇರುವಂತೆ ನೇಮಕಾತಿ. ಕನಿಷ್ಠ ಶೇ.1ರಷ್ಟು ತೃತೀಯ ಲಿಂಗಿಗಳಿಗೆ ಮೀಸಲಾತಿ
*ಭಜರಂಗದಳ ನಿಷೇಧ
*ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷದವರೆಗೆ ವಿಸ್ತರಣೆ
*ಗ್ರಾಮೀಣ ಕೃಷಿಕ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ
*ಪಶುಭಾಗ್ಯ- ಹಸು/ ಎಮ್ಮೆ ಖರೀದಿಗೆ ಬಡ್ಡಿರಹಿತ 3 ಲಕ್ಷ ಸಾಲ
*ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ
*ಪ್ರತಿ ಕ್ಷೇತ್ರದಲ್ಲಿ ಶಿತಲೀಕರಣ ಘಟಕ ಸ್ಥಾಪನೆ
*ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ಧು
*ಎಪಿಎಂಸಿ ಕಾಯ್ದೆ ರದ್ಧು ಪಡಿಸುತ್ತೇವೆ
*ರೈತರ ಮೇಲಿನ ಎಲ್ಲಾ ಕೇಸ್ ವಾಪಸ್
*ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಆರಂಭ
*ಸಾವಯವ ಕೃಷಿ ಯೋಜನೆಗೆ 2500ಕೋಟಿ ಹೂಡಿಕೆ
*ನೇಗಿಲ ತುಡಿತ ಹೆಸರಿನಲ್ಲಿ ಮಂಡಳಿ ಸ್ಥಾಪನೆ
*ಹನಿ,ತುಂತುರು ನೀರಾವರಿಗೆ ೧೦೦ ರಷ್ಟು ಸಬ್ಸಿಡಿ
*ಸೌರ ಪಂಪ್ ಸೆಟ್ ಯೋಜನೆಗೆ ಸಬ್ಸಿಡಿ
*ಬೀದರ್,ಕಲಬುರಗಿಯಲ್ಲಿ ಕೃಷಿ ಉತ್ಪನ್ನ ಸಂಶೋಧನಾ ಸಂಸ್ಥೆ
*ಚಾಮರಾಜನಗರದಲ್ಲಿ ಅರಣ್ಯ ಸಂಶೋಧನಾ ಸಂಸ್ಥೆ
*ಗ್ರಾ.ಪಂ ವ್ಯಾಪ್ತಿಯಲ್ಲಿ ಯಾಂತ್ರೀಕರಣ ಸೌಲಭ್ಯ
*ಪತ್ರಕರ್ತರ ಕ್ಷೇಮಾಭಿವೃದ್ಧಿ ಸ್ಥಾಪನೆ- 500 ಕೋಟಿ
*ಸ್ವಸಹಾಯ ಗುಂಪುಗಳಿಗೆ 3 ಲಕ್ಷ ಬಡ್ಡಿರಹಿತ ಸಾಲ
*ಪ್ರತ್ಯೇಕ ಕೃಷಿ ಕೋಶ ಕೇಂದ್ರ ಸ್ಥಾಪನೆ
*ಗದಗದಲ್ಲಿ ಹತ್ತಿ ರಫ್ತು ಸಂಸ್ಕರಣ ಕೇಂದ್ರ
*ಸಿಂಧನೂರಿನಲ್ಲಿ ಅಕ್ಕಿ ಸಂಸ್ಕರಣ ಕೇಂದ್ರ
*ಬೆಳಗಾವಿ, ಬಾಗಲಕೋಟೆ, ಮಂಡ್ಯದಲ್ಲಿ ಎಥೆನಾಲ್ ಘಟಕ
*ಕೊಡಗು,ಚಿಕ್ಕಮಗಳೂರಿನಲ್ಲಿ ಕಾಳು ಮೆಣಸು ಸಂಸ್ಕರಣೆ
*ದೊಡ್ಡಬಳ್ಳಾಪುರದಲ್ಲಿ ಹೂ ಸಂಶೋಧನಾ ಕೇಂದ್ರ
*ಜೇನು ಸಾಕಾಣಿಕೆಗೆ 50 ಕೋಟಿ ರೂ.